ಬೈಕ್‍ಗೆ ಆಟೋ ಡಿಕ್ಕಿ : ವ್ಯಕ್ತಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

t-narasipura

ತಿ.ನರಸೀಪುರ, ಫೆ.3- ಲಗೇಜ್ ಆಟೋ ಹಾಗೂ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಒಬ್ಬಾತ ಮೃತಪಟ್ಟು , ಮತ್ತಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಕುರುಬೂರು ಗ್ರಾಮದ ಗೇಟ್ ಬಳಿ ನಡೆದಿದೆ.ತಾಲ್ಲೂಕಿನ ಕುರುಬೂರು ಗ್ರಾಮದ ಮಹದೇವಯ್ಯ(55) ಮೃತಪಟ್ಟವರಾಗಿದ್ದು , ಅದೇ ಗ್ರಾಮದ ಬಾಬು(40) ಆತನ 7 ವರ್ಷದ ಮಗು ಮೊಹಿತ್ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೆ ಆಟೋ ಚಾಲಕ ರಂಗರಾಜು(37) ಸಹ ಗಂಭೀರ ಗಾಯಗೊಂಡು ತಿ.ನರಸೀಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆ ವಿವರ:

ಕುರುಬೂರು ಗ್ರಾಮದವರಾದ ಮಹದೇವಯ್ಯ, ಬಾಬು ಹಾಗೂ ಆತನ ಮಗು ಒಂದೇ ಸ್ಕೂಟರ್‍ನಲ್ಲಿ ಮೂವರು ಕಾರ್ಯ ನಿಮಿತ್ತ ತಿ.ನರಸೀಪುರಕ್ಕೆ ತೆರಳುತ್ತಿದ್ದು, ಗ್ರಾಮದ ಬಸ್ ನಿಲ್ದಾಣದಲ್ಲಿ ಮುಖ್ಯ ರಸ್ತೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮೈಸೂರು ಕಡೆಯಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಆಟೋ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin