ಬೈಕ್‍ಗೆ ಕಾರು ಡಿಕ್ಕಿ: ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಯುವಕರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Nike-Accident

ಕೋಲಾರ, ಜೂ.22-ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‍ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಸಾಕರಸನಹಳ್ಳಿ ನಿವಾಸಿಗಳಾದ ಅರವಿಂದ್(18), ಮುನಿರಾಜು(20), ಅರುಣ್(18) ಮೃತಪಟ್ಟ ದುರ್ದೈವಿಗಳು.   ಈ ಮೂವರು ಯುವಕರು ನರಸಾಪುರ ಕೈಗಾರಿಕಾ ಪ್ರದೇಶದ ಬಡವೆ ಕಾರ್ಖಾನೆ(ದ್ವಿಚಕ್ರ ವಾಹನ ಬಿಡಿ ಭಾಗಗಳ ತಯಾರಿಕಾ ಘಟಕ)ಯಲ್ಲಿ ಕೆಲಸ ಮಾಡುತ್ತಿದ್ದು , ರಾತ್ರಿ ಪಾಳಿಗೆ ತಮ್ಮ ಸ್ವಗ್ರಾಮದಿಂದ ಮಧ್ಯರಾತ್ರಿ 1.30ರಲ್ಲಿ ಒಂದೇ ಬೈಕ್‍ನಲ್ಲಿ ಕಾರ್ಖಾನೆಗೆ ತೆರಳುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿ ನರಸಾಪುರ ಸಮೀಪದ ಬೆಳ್ಳೂರು ಕ್ರಾಸ್ ಬಳಿ ಬರುತ್ತಿದ್ದಂತೆ ಅತಿವೇಗವಾಗಿ ಬಂದ ಕಾರು ಬೈಕ್‍ಗೆ ಅಪ್ಪಳಿಸಿ ನಿಯಂತ್ರಣ ಕಳೆದುಕೊಂಡು ಪಕ್ಕದ ಪಾಳು ಬಾವಿಗೆ ಬಿದ್ದಿದೆ. ಅಪಘಾತದಿಂದಾಗಿ ಬೈಕ್‍ನಲ್ಲಿದ್ದ ಮೂವರು ಒಂದೊಂದು ಕಡೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಕಾರು ಹೊಸಕೋಟೆ ಗ್ರಾಮದ ಗಂಗಾಪುರಕ್ಕೆ ಸೇರಿದ್ದು ಎನ್ನಲಾಗಿದ್ದು , ಕಾರಿನಲ್ಲಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಸುದ್ದಿ ತಿಳಿದ ಪಿಎಸ್‍ಐ ಲಕ್ಷ್ಮಿನಾರಾಯಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೂವರ ಶವಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin