ಬೈಕ್ಗೆ ಟಾಟಾ ಸುಮೊ ಡಿಕ್ಕಿ : ಬೈಕ್ ಸವಾರ ಸಾವು
ಈ ಸುದ್ದಿಯನ್ನು ಶೇರ್ ಮಾಡಿ
ಚಿತ್ರದುರ್ಗ,ಮಾ.3– ಬೈಕ್ಗೆ ಟಾಟಾಸುಮೊ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರು ಮೂಲದ ಸ್ವರೂಪ್ ಮಠಪತಿ(30) ಮೃತಪಟ್ಟ ಸವಾರ. ಬೆಂಗಳೂರಿನಿಂದ 9 ಜನ ಸ್ನೇಹಿತರೊಂದಿಗೆ 5 ಬೈಕ್ನಲ್ಲಿ ಹಂಪಿಗೆ ತೆರಳುತ್ತಿದ್ದರು. ಈ ವೇಳೆ ಮಾಡನಾಯಕನಹಳ್ಳಿ ಬಳಿ ಸ್ವರೂಪ್ ಚಲಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ವರೂಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಟಾಟಾ ಸುಮೋ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದು , ಮುಂದಿನ ಕ್ರಮ ಕೈಗೊಂಡಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments