ಬೈಕ್‍ನಲ್ಲಿ ಆಯ ತಪ್ಪಿ ಬಿದ್ದು ಭೀಕರ ಅಪಘಾತ, ಮೂವರ ಸಾವು 

ಈ ಸುದ್ದಿಯನ್ನು ಶೇರ್ ಮಾಡಿ

accident
ಚಿಕ್ಕಬಳ್ಳಾಪುರ, ಮಾ.6- ಬೈಕ್‍ನಲ್ಲಿ ಆಯ ತಪ್ಪಿ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಐಮನರೆಡ್ಡಿ ಕ್ರಾಸ್ ಬಳಿ ಇಂದು ಮುಂಜಾನೆ ನಡೆದಿದೆ.ಮೃತರನ್ನು ಆಂಧ್ರಪ್ರದೇಶದ ಗಾಜುವಾರಪಲ್ಲಿ ಗ್ರಾಮದ ಮುರಳಿ (25), ಭಾರ್ಗವ್ (23), ಸಂತೋಷ್ (26) ಎಂದು ಗುರುತಿಸಲಾಗಿದೆ.
ಚಿಂತಾಮಣಿಯಿಂದ ಸ್ವಗ್ರಾಮಕ್ಕೆ ಮೂವರು ಒಂದೇ ಬೈಕ್‍ನಲ್ಲಿ ತೆರಳುವಾಗ ಐಮನರೆಡ್ಡಿ ಕ್ರಾಸ್ ಬಳಿ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ.ಗಂಭೀರವಾಗಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಅಸು ನೀಗಿದ್ದಾರೆ.ಚಿಂತಾಮಣಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವಗಳನ್ನು ಸಾಗಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin