ಬೈಕ್ ಅಪಘಾತ : ಓರ್ವನ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

accident--bike

ಕೆ.ಆರ್.ಪೇಟೆ, ಸೆ.26- ಬೈಕ್ ಮತ್ತು ಎತ್ತಿನ ಗಾಡಿ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು , ಹಿಂಬದಿಯ ಸವಾರ ಗಾಯಗೊಂಡಿರುವ ಘಟನೆ ನಡೆದಿದೆ.ಪಟ್ಟಣದ ರೂಪಾಶ್ರೀ ಸ್ಟುಡಿಯೋ ಮಾಲೀಕ ರವಿ (43) ಮೃತಪಟ್ಟ ದುರ್ದೈವಿ. ಈತನ ಸ್ನೇಹಿತ ಅರುಣ್‍ಕುಮಾರ್ ಗಾಯಗೊಂಡ ಛಾಯಾಗ್ರಾಹಕನಾಗಿದ್ದು ಇದೀಗ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾನೆ.ರವಿ ಮತ್ತು ಅರುಣ್‍ಕುಮಾರ್ ಕೆಲಸದ ನಿಮಿತ್ತ ಬೈಕ್‍ನಲ್ಲಿ ಮೈಸೂರಿಗೆ ಹೋಗಿದ್ದರು. ತಮ್ಮ ಕೆಲಸ ಮುಗಿಸಿ ಕೆ.ಆರ್.ಪೇಟೆಗೆ ವಾಪಸ್ಸಾಗುವ ಸಂದರ್ಭದಲ್ಲಿ ತಾಲೂಕಿನ ಅಗಸರಹಳ್ಳಿ ಗೇಟ್ ಬಳಿ ಇರುವ ಮೈಸೂರು-ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ಸುಮಾರು 10 ಗಂಟೆಯ ಸಮಯದಲ್ಲಿ ಎತ್ತಿನ ಬಂಡಿ ಮತ್ತು ಬೈಕ್ ಪರಸ್ಪರ ಡಿಕ್ಕಿ ಸಂಭಿಸಿದೆ.
ರವಿ ಸ್ಥಳದಲ್ಲಿಯೇ ಮೃತಪಟ್ಟರು. ಹಿಂಬದಿಯ ಬೈಕ್ ಸವಾರ ಅರುಣ್‍ಕುಮಾರ್ ಗಾಯಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರಿಗೆ ಪತ್ನಿ ತಾಲೂಕಿನ ಅಗ್ರಹಾರಬಾಚಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಟಿ.ಜೆ.ವಿಮಲಾ ಹಾಗೂ ಇಬ್ಬರು ಮಕ್ಕಳಿದ್ದಾರೆ. ಮೃತರ ನಿಧನಕ್ಕೆ ತಾಲೂಕಿನ ವಿವಿಧ ಗಣ್ಯರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆಯು ಪಟ್ಟಣದ ಮೃತರ ತೋಟದಲ್ಲಿ ನಡೆಯಿತು.

► Follow us on –  Facebook / Twitter  / Google+

Facebook Comments

Sri Raghav

Admin