ಬೈಕ್, ಕಾರು ಕಳ್ಳತನ ಕೇಳಿರ್ತೀರಾ, ಇವ್ರು ಜೆಸಿಬಿ ಕದ್ದು ಸಿಕ್ಕಿಬಿದ್ದರು..!

ಈ ಸುದ್ದಿಯನ್ನು ಶೇರ್ ಮಾಡಿ

JDC--01

ಮಂಡ್ಯ, ಜೂ.17- ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿಯ ಬೆಳ್ಳೂರು ಪೆಟ್ರೋಲ್ ಬಂಕ್ ಬಳಿ ಫೆ.2ರಂದು ಜೆಸಿಬಿ ಕಳವು ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು ಬೆಳ್ಳೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ತಿಪಟೂರು ನಗರಸಭೆ ಸದಸ್ಯೆ ರೂಪಾವತಿ ಅನೂಪ್‍ಗೌಡ,  ನೆಲಮಂಗಲದ ಜಕ್ಕಸಂದ್ರದ ನಾಗರಾಜು, ಬೆಂಗಳೂರಿನ ಕಲಾಸಿಪಾಳ್ಯದ ನವೀದ್ ಪಾಷ, ಇನ್ನೂ ಮೂವರು ಆರೋಪಿಗಳ ಹೆಸರು ತಿಳಿದುಬಂದಿಲ್ಲ.
ಫೆ.2ರಂದು ಬೆಳ್ಳೂರು ಪೆಟ್ರೋಲ್‍ಬಂಕ್ ಬಳಿ ನಿಲ್ಲಿಸಿದ್ದ ಜೆಸಿಬಿಯನ್ನು ಆರು ಮಂದಿ ಆರೋಪಿಗಳು ಕಳ್ಳತನ ಮಾಡಿದ್ದರು.

ಈ ಬಗ್ಗೆ ಜೆಸಿಬಿ ಮಾಲೀಕ ಪ್ರಕಾಶ್ ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಪ್ರಕರಣ ದಾಖಲಿಸಿಕೊಂಡ ಬಳಿಕ ಸಿಪಿಐ ಹರೀಶ್‍ಬಾಬು ನೇತೃತ್ವದ ಅಪರಾಧ ಪತ್ತೆ ಕಾರ್ಯದಳ ಕಾರ್ಯಾಚರಣೆ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ಕಾರ್ಯವನ್ನು ಎಸ್‍ಪಿ ಸುಧೀರ್‍ಕುಮಾರ್ ಶ್ಲಾಘಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin