ಬೈಕ್ ಡಿಕ್ಕಿ : ಪೀಠಕ್ಕೆ ತೆರಳುತ್ತಿದ್ದ ಸೇವಾಲಾಲ್ಮಾ, ಲಾಧಾರಿಯೊಬ್ಬರ ಸಾವು 

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ,ಫೆ.15- ಸೂರಗೊಂಡನಕೊಪ್ಪದ ಸೇವಾಲಾಲ್ ಪೀಠಕ್ಕೆ ತೆರಳುತ್ತಿದ್ದ ಸೇವಾಲಾಲ್ ಮಾಲಾಧಾರಿಯೊಬ್ಬರಿಗೆ ಅಪರಿಚಿತ ಬೈಕ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಹೊನ್ನಾಳಿ ತಾಲ್ಲೂಕು ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹರಪ್ಪನಹಳ್ಳಿ ತಾಲ್ಲೂಕು ಶಿರಗಾನಹಳ್ಳಿ ನಿವಾಸಿ ರೂಪ್ಲಾ ನಾಯ್ಕ್(58) ಸಾವನ್ನಪ್ಪಿರುವ ವ್ಯಕ್ತಿ. ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳ ಹಾಗೆಯೇ ಸೇವಾಲಾಲ್ ಪೀಠಕ್ಕೆ ತೆರಳುವ ಭಕ್ತರು ಮಾಲಾಧಾರಿಗಳಾಗುವ ಪದ್ಧತಿ ಈ ಭಾಗದಲ್ಲಿ ಪ್ರಚಲಿತದಲ್ಲಿದೆ. ಅದೇ ರೀತಿ ರೂಪ್ಲಾನಾಯ್ಕ್ ಕೂಡ ಮಾಲೆ ಧರಿಸಿ ಮೊಮ್ಮಗನೊಂದಿಗೆ ಶಿರಗಾನಹಳ್ಳಿಯಿಂದ ಸೂರಗೊಂಡನ ಕೊಪ್ಪಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದರು. ಪೀಠ ತಲುಪಬೇಕಾದರೆ ಸುಮಾರು 60 ಕಿ.ಮೀಗೂ ಹೆಚ್ಚಿನ ದೂರವನ್ನು ತನ್ನ ಮೊಮ್ಮಗ ನಾಲ್ಕು ವರ್ಷದ ವೈಭವ್ ಸೇರಿ 15 ಮಂದಿ ತಂಡದೊಂದಿಗೆ ತೆರಳುವಾಗ ಚಿನ್ನಿಕಟ್ಟೆ ಗ್ರಾಮದ ಮುಖ್ಯರಸ್ತೆ ಬಳಿ ಅಪರಿಚಿತ ಬೈಕ್ ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ರೂಪ್ಲಾ ನಾಯ್ಕ್ ಅವರನ್ನು ಕೂಡಲೇ ಅಸ್ಪತ್ರೆಗೆ ಒಯ್ಯುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin