ಬೈಕ್ ಮೇಲೆ ಕುಳಿತು ಬುಸುಗುಟ್ಟಿದ ನಾಗಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Nagappa

ಹಾಸನ, ಆ.13- ನಗರದ ರೈಲ್ವೆ ವಸತಿಗೃಹದ ನಿವಾಸಿಗಳು ಆತಂಕದಲ್ಲಿದ್ದರು. ಯಾಕೆಂದರೆ ಬೈಕ್‍ನಲ್ಲಿ ನಾಗರಾಜ (ಹಾವು) ಪ್ರತ್ಯಕ್ಷವಾಗಿದ್ದ..! ರೈಲ್ವೆ ಸೀನಿಯರ್ ಸೆಕ್ಷನ್ ಇಂಜಿನಿಯರ್ ಸುಭೀಶ್‍ಕುಮಾರ್ ಅವರ ಮನೆಯಲ್ಲಿ ನಾಗರಹಾವು ಕಾಣಿಸಿಕೊಂಡಿತು. ಆ ಹಾವು ಮನೆಯಿಂದ ಹೊರ ಬಂದು ಮನೆಯ ಮುಂದಿದ್ದ ಬೈಕ್‍ನ ಹೆಡ್‍ಲೈಟ್‍ನ ಡೂಮ್ ಒಳಗೆ ಸೇರಿಕೊಂಡಿತು. ನಿನ್ನೆ ಸಂಜೆ 5 ಗಂಟೆ ಹೊತ್ತಿನಲ್ಲಿ ಸುಭೀಶ್‍ಕುಮಾರ್ ಅವರ ಮನೆಯಲ್ಲಿದ್ದ ರಟ್ಟಿನ ಬಾಕ್ಸ್‍ನಲ್ಲಿ ಭಾರೀ ಗಾತ್ರದ ನಾಗರಹಾವು ಕಾಣಿಸಿಕೊಂಡಿತು.   ಮನೆಯವರು ಆತಂಕದಿಂದ ಚೀರಾಡಿದಾಗ ಹಾವು ಮನೆಯಿಂದ ಹೊರ ಬಂದು ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‍ಗೆ ಸೇರಿಕೊಂಡಿತು. ಬೈಕ್‍ನ ಹೆಡ್‍ಲೈಟ್ ಮತ್ತು ಹ್ಯಾಂಡಲ್‍ಗಳ ನಡುವಿನ ಜಾಗದೊಳಗೆ ಸೇರಿಕೊಂಡ ನಾಗರಹಾವು ಹೊರ ಬರದೆ ಅವಿತುಕೊಂಡಿತು. ನಗರದಲ್ಲಿ ಹಾವು ಹಿಡಿಯುವ ಶೇಷಪ್ಪ ಅವರು ನಿನ್ನೆ ಊರಿನಲ್ಲಿರಲಿಲ್ಲ. ಹಾಗಾಗಿ ಹಾವು ಹಿಡಿಯುವವರ ಹುಡುಕಾಟ ಸಂಜೆ 7.30ರ ವರೆಗೂ ನಡೆಯಿತು.  ಅಂತಿಮವಾಗಿ ಹಾವು ಹಿಡಿಯುವ ಉಳುವಾರೆ ಕೇಶವನನ್ನು ಕರೆಸಲಾಯಿತು. ಹಾವನ್ನು ಹಿಡಿದ ಕೇಶವ ಅದನ್ನು ಆರಣ್ಯಕ್ಕೆ ಬಿಡಲು ಬಿಟ್ಟರು.

► Follow us on –  Facebook / Twitter  / Google+

Facebook Comments

Sri Raghav

Admin