ಬೈಕ್ ಸವಾರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

accident--bike

ಬೇಲೂರು, ಅ.29- ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿನ ಜಮೀನೊಂದರ ತಂತಿ ಬೇಲಿಯ ಕಲ್ಲಿನ ಕಂಬಕ್ಕೆ ಗುದ್ದಿ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಂಕೇನಹಳ್ಳಿ ಗ್ರಾಮದ ಸಮೀಪ ನಡೆದಿದೆ. ಹಾಸನ ತಾಲೂಕಿನ ದುದ್ದ ಸಮೀಪದ ವೇದಾವತಿ ಗ್ರಾಮದ ಪುರುಷೋತ್ತಮ( 20) ಮೃತಪಟ್ಟ ದುರ್ದೈವಿ.ಈತ ಬೇಲೂರು ತಾಲೂಕಿನ ನಟ್ಟೇಕೆರೆ ಗ್ರಾಮದ ತಮ್ಮ ಸ್ನೇಹಿತನ ಮನೆಗೆ ಬೈಕ್‍ನಲ್ಲಿ ತಡರಾತ್ರಿ ಬರುತ್ತಿದ್ದಾಗ ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಂಕೇನಹಳ್ಳಿ ಸಮೀಪದ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿನ ಜಮೀನೊಂದರ ತಂತಿ ಬೇಲಿಯ ಕಲ್ಲಿನ ಕಂಬಕ್ಕೆ ಗುದ್ದಿ ಮೃತಪಟ್ಟಿದ್ದಾನೆ.ಸ್ಥಳಕ್ಕೆ ಬೇಲೂರು ಪಿಎಸ್‍ಐ ಬಾಲು ಮತ್ತು ಸಿಬ್ಬಂದಿಗಳು ಭೈೀಟಿನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ, ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin