ಬೊಲಿವಿಯನ್ನರ ವಿಶಿಷ್ಟ ಭೂತಾಯಿ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

Bolevi1
ನಮ್ಮಲ್ಲಿ ಭೂಮಿಯನ್ನು ಭೂತಾಯಿ ಎಂದು ಗೌರವದಿಂದ ಪೂಜಿಸುತ್ತೇವೆ. ಇದೇ ರೀತಿಯ ಆಚರಣೆಗಳು ಜಗತ್ತಿನ ವಿವಿಧೆಡೆ ನಡೆಯುತ್ತವೆ. ಬೊಲಿವಿಯಾದಲ್ಲೂ ಭೂ ಮಾತೆಯನ್ನು ವಿಶಿಷ್ಟವಾಗಿ ಗೌರವಿಸುವ ಸಂಪ್ರದಾಯ ಇದೆ. ಬೊಲಿವಿಯಾದ ಅಂಡೀಸ್ ಪರ್ವತದ ತಪ್ಪಲಿನಲ್ಲಿರುವ ಎಲ್ ಅಲ್ಟೊ ನಗರದಲ್ಲಿ ಪ್ರತಿ ವರ್ಷ ಆಗಸ್ಟ್ ತಿಂಗಳಿನ ಎರಡನೇ ವಾರ ಬೊಲಿವಿಯನ್ನರು ಪಂಚಮಾಮಾ ಎಂದು ಕರೆಯುವ ಭೂ ಮಾತೆ ಮತ್ತು ಸುಗ್ಗಿ ಹಬ್ಬ ಆಚರಿಸಲು ಒಂದೆಡೆ ಸೇರುತ್ತಾರೆ.ಈ ಸಂಪ್ರದಾಯಿಕ ಸಮಾರಂಭದ ವೇಳೆ ಸ್ಥಳೀಯ ಅಮೆಟಸ್ ಅಥವಾ ದೇಹ ಮತ್ತು ಮನಸ್ಸಿನ ಹಿರಿಯ ಅಯಮಾರಾ ಎಂಬ ವೈದ್ಯ ದೇವರನ್ನು ಸಂತೃಪ್ತಿಗೊಳಿಸುವ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಸಿಹಿ ತಿಂಡಿಗಳು, ಮದ್ಯ ಮತ್ತು ಲಾಮಾದ ಮಾಂಸವನ್ನು ಅಮೆಟಸ್‍ಗೆ ನೈವೇದ್ಯ ಮಾಡುವ ಸಂಪ್ರದಾಯವಿದೆ.

Bolevi
ಇಲ್ಲಿಮನಿ ಎಂಬ ಪರ್ವತದ ದಿಕ್ಕಿನತ್ತ ಉರಿಯುವ ಉತ್ಸವದ ಬೆಂಕಿ ಮುಂದೆ ನಿಂತು ನೈವೇದ್ಯ ಸಮರ್ಪಿಸಿ ಕೈಗಳನ್ನು ಎತ್ತುತ್ತಾರೆ. ಬೇಯಿಸಿದ ಆಹಾರ, ತೆಂಗಿನ ಗರಿ, ಆಲ್ಕೋಹಾಲ್, ವೈನ್, ಸಿಗರೇಟ್ ಮತ್ತು ಸ್ಥಳೀಯ ಪೇಯ ಚೀಚಾವನ್ನು ಭೂ ತಾಯಿಗೆ ಅರ್ಪಿಸುತ್ತಾರೆ. ಭೂಮಾತೆ ಸಂತುಷ್ಟಳಾದರೆ ಧನಕನಕ ಚತುಷ್ಟಯಗಳೂ ಪ್ರಾಪ್ತಿಯಾಗು ತ್ತದೆಂಬ ಐತಿಹ್ಯವಿದೆ.  ನಗರ ಪ್ರದೇಶದಲ್ಲಿ ವಾಸಿ ಸುವ ಜನರು ಕೂಡ ಈ ಸಂಪ್ರದಾಯವನ್ನು ಆಚರಿಸು ತ್ತಾರೆ. ತಮಗೆ ಮನೆ, ವಾಹನ, ಆರೋಗ್ಯ, ಐಶ್ವರ್ಯಗಳನ್ನು ದಯಪಾಲಿಸುವಂತೆ ಪ್ರಾರ್ಥಿಸು ವುದು ಈ ಹಬ್ಬದ ವಾಡಿಕೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin