ಬೋಗಸ್ ಪಡಿತರ ಚೀಟಿ ಕಡಿವಾಣಕ್ಕೆ ಸೂಕ್ತ ಕ್ರಮ : ಯು.ಟಿ.ಖಾದರ್

ಈ ಸುದ್ದಿಯನ್ನು ಶೇರ್ ಮಾಡಿ

UT-Khadaraಬೆಂಗಳೂರು,ಅ.3- ರಾಜ್ಯದಲ್ಲಿ ಸುಮಾರು 9 ಲಕ್ಷಕ್ಕೂ ಅಧಿಕ ಬೋಗಸ್ ಪಡಿತರ ಚೀಟಿಗಳಿವೆ. ಇದರಿಂದಾಗಿ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ.ಖಾದರ್ ತಿಳಿಸಿದರು.  ಮಾನಸ ಸಿಐ ಮತ್ತು ಆಂಟ್ ಸೆಂಟರ್‍ನಲ್ಲಿ ಪ್ರಫೌಂಡ್ ಬೈಲ್ಯಾಕಲ್ ಸೆನ್ಸರಿ ನ್ಯೂರಲ್ ಹಿಯರಿಂಗ್ ಲಾಸ್ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಲೈವ್ ಸರ್ಜರಿ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಕಲಿ ಪಡಿತರ ಚೀಟಿದಾರರನ್ನು ಪತ್ತೆ ಹಚ್ಚಿ ಅದಕ್ಕೆ ಕಡಿವಾಣ ಹಾಕದೇ ಸರ್ಕಾರ ಹೆಚ್ಚುವರಿಯಾಗಿ ಎಷ್ಟೇ ಆಹಾರ ಧಾನ್ಯಗಳನ್ನು ಪಡಿತರದಾರರಿಗೆ ನೀಡಲು ಪ್ರಯತ್ನಿಸಿದರೂ ಅದು ಉಪಯೋಗಕ್ಕೆ ಬರುವುದಿಲ್ಲ. ಬೋಗಸ್ ಪಡಿತರ ಚೀಟಿಗಳನ್ನು ರದ್ದು ಮಾಡುವ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಈಗಾಗಲೇ ಪಡಿತರ ಚೀಟಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿದ ಹಿನ್ನೆಲೆಯಲ್ಲಿ ಸುಮಾರು 8 ಲಕ್ಷದಷ್ಟು ನಕಲಿ ಬೋಗಸ್ ಪಡಿತರ ಚೀಟಿಗಳನ್ನು ರದ್ದುಪಡಿಸಿದ್ದೇವೆ. ಆದರೆ ಇನ್ನೂ ಅನೇಕ ನಕಲಿ ಪಡಿತರ ಚೀಟಿಗಳು ಅಸ್ಥಿತ್ವದಲ್ಲಿವೆ. ಇದಕ್ಕೆ ಶೀಘ್ರ ಕಡಿವಾಣ ಬೀಳಲಿದೆ ಎಂದು ಹೇಳಿದರು. ಪ್ರಫೌಂಡ್ ಬೈಲ್ಯಾಕಲ್ ಸೆನ್ಸರಿ ನ್ಯೂರಲ್ ಹಿಯರಿಂಗ್ ಲಾಸ್ ಎಂಬ ಕಾಯಿಲೆಗೆ ಮಾನಸ ಸಿಐ ಮತ್ತು ಆಂಟ್ ಸೆಂಟರ್‍ನಲ್ಲಿ ಚಿಕಿತ್ಸೆಯನ್ನು ಪರಿಚಯಿಸಿದ್ದು, ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ರಾಜ್ಯವನ್ನು ಶ್ರವಣ ದೋಷ ಮುಕ್ತ ಕರ್ನಾಟಕವನ್ನಾಗಿ ಮಾಡುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದರು. ಕಾರ್ಯಕ್ರಮದಲ್ಲಿ ನೂತನ ಯೋಜನೆಯ ರೂವಾರಿ ಗ್ರೀಸ್‍ನ ಡಾ.ಥ್ರೈಪಾನ್ ಸೇರಿದಂತೆ ಅನೇಕರು ಹಾಜರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin