ಬೋನಿಗೆ ಬಿಟ್ಟು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ

ಈ ಸುದ್ದಿಯನ್ನು ಶೇರ್ ಮಾಡಿ

chiratre

ರಾಮನಗರ, ಅ.17- ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯೊಂದು ಬೋನಿಗೆ ಬಿದ್ದಿದೆ.ತಾಲ್ಲೂಕಿನ ಆಸು-ಪಾಸಿನಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಲವೆಡೆ ಬೋನುಗಳನ್ನಿಟ್ಟು , ಸಾಕಷ್ಟು ಪ್ರಯಾಸ ಪಡುತ್ತಿದ್ದು, ಇದರ ನಡುವೆ ಇಂದು ಬೆಳಗ್ಗೆ ಹೆಗ್ಗಡಗೆರೆ ಗ್ರಾಮದ ಹರೀಶ್ ಎಂಬುವರ ಹೊಲದಲ್ಲಿ ಇರಿಸಿದ್ದ ಬೋನಿಗೆ ಸುಮಾರು 10 ವರ್ಷ ಪ್ರಾಯದ ಗಂಡು ಚಿರತೆ ಸಿಕ್ಕಿ ಹಾಕಿಕೊಂಡಿದೆ. ಇದನ್ನು ನೋಡಿದ ಕೆಲ ಯುವಕರು ತಕ್ಷಣ ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಚಿರತೆ ಸಿಕ್ಕಿ ಬಿದ್ದಿರುವ ಸುದ್ದಿ ಕೇಳಿ ಅಕ್ಕ-ಪಕ್ಕದ ಗ್ರಾಮಸ್ಥರು ತಂಡೋಪತಂಡವಾಗಿ ಬಂದು ವೀಕ್ಷಣೆ ಮುಂದಾದಾಗ ಇಲ್ಲಿ ಕೆಲ ಕಾಲ ಇಲ್ಲಿ ನೂಕು ನುಗ್ಗಲು ಉಂಟಾಗಿತ್ತು. ದೊಡ್ಡ ಚಿರತೆಯಾದ್ದರಿಂದ ಅದನ್ನು ಬೋನ್‍ನ್ನು ಬಟ್ಟೆಯಿಂದ ಮುಚ್ಚಿ ಎಚ್ಚರಿಕೆಯಿಂದ ವಾಹನದಲ್ಲಿ ಅರಣ್ಯ ಸಿಬ್ಬಂದಿಗಳು ಬೇರೆಡೆಗೆ ಸಾಗಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin