ಬೋನಿಗೆ ಬಿತ್ತು ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ

ಈ ಸುದ್ದಿಯನ್ನು ಶೇರ್ ಮಾಡಿ

Chirate--02
ಟಿ.ನರಸೀಪುರ, ಫೆ.3- ಕಳೆದ ಕೆಲವು ದಿನಗಳಿಂದ ಕುರಿ,ಕೋಳಿ ಮತ್ತು ನಾಯಿಗಳನ್ನು ತಿಂದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದ್ದ ಚಿರತೆಯನ್ನು ಬಲೆಗೆ ಬೀಳಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ತಾಲ್ಲೂಕಿನ ಕುಪ್ಯಗ್ರಾಮದ ಬಿ.ಕೆ.ರಮೇಶಧ ಎಂಬುವರ ತೋಟದ ಮನೆಯಲ್ಲಿ ಮೂರು ದಿನಗಳ ಹಿಂದೆ ಇಡಲಾಗಿದ್ದ ಬೋನಿಗೆ ಕಳೆದ ರಾತ್ರಿ ಚಿರತೆ ಬಿದ್ದಿದೆ. ಕಳೆದ ಕೆಲವು ದಿನಗಳಿಂದ ಚಿರತೆ ಗ್ರಾಮದಲ್ಲಿ ಓಡಾಟ ನಡೆಸುತ್ತಿದ್ದು, ಕೋಳಿ, ಕುರಿಗಳನ್ನು ತಿಂದು ಗ್ರಾಮಸ್ಥರಲ್ಲಿ ಭೀತಿ ಉಂಟುಮಾಡಿತ್ತು. ಬಿ.ಕೆ.ರಮೇಶ್ ತಮ್ಮ ಫಾರ್ಮ್ ಹೌಸ್‍ನಲ್ಲಿಯೇ ಚಿರತೆ ಓಡಾಡುತ್ತಿದೆಯೆಂಬ ಮಾಹಿತಿಯನ್ನು ಅರಣ್ಯ ಇಲಾಖೆಯ ಗಮನಕ್ಕೆ ಬಂದಿದ್ದು, ಚಿರತೆ ಬೇಟೆಗೆ ಬಲೆ ಬೀಸಿದ್ದರು.

ಫಾರಂ, ಹುಲ್ಲಿನ ಪೊದೆಯಲ್ಲಿ ಮೂರು ದಿನಗಳ ಹಿಂದೆಯೇ ಬೋನಿಗೆ ಮೇಕೆಮರಿಯನ್ನು ಕಟ್ಟಿ ಚಿರತೆಗಾಗಿ ಕಾದು ಕುಳಿತಿದ್ದರು. ಅಧಿಕಾರಿಗಳ ನಿರೀಕ್ಷೆ ಯಂತೆ ಕಳೆದ ರಾತ್ರಿ ಮೇಕೆಯನ್ನು ತಿನ್ನಲು ಬಂದ ಚಿರತೆ ಬೋನಿನೊಳಗೆ ಸೆರೆಯಾಗಿದೆ. ಇದರಿಂದಾಗಿ ಗ್ರಾಮಸ್ಥರ ಆತಂಕ ದೂರಾಯಿತಾದರೂ ಇನ್ನೂ ಕೆಲ ಚಿರತೆಗಳಿರುವ ಬಗ್ಗೆ ಸಂಶಯ ಎದುರಾಗಿದೆ. ಸೆರೆಸಿಕ್ಕ ಹೆಣ್ಣು ಚಿರತೆಯನ್ನು ನಾಗರಹೊಳೆ ಅಥವಾ ಬಂಡೀಪುರ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದೆಂದು ಅಧಿಕಾರಿಗಳು ತಿಳಿಸಿದರು. ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿ ಟಿ.ಸುನೀತಾ, ಉಪ ವಲಯ ಅರಣ್ಯ ಅಧಿಕಾರಿ ಮಂಜುನಾಥ್, ಸಿಬ್ಬಂದಿಗಳಾದ ಚಂದ್ರಪ್ಪ, ನಾಗರಾಜು ಮತ್ತಿತರರಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin