ಬೋಲ್ಡ್ ಅಂಡ್ ಬ್ಯೂಟಿಫುಲ್ ಶುಭರಕ್ಷಾ

ಈ ಸುದ್ದಿಯನ್ನು ಶೇರ್ ಮಾಡಿ

Shubharaksha

ಬಣ್ಣದ ಲೋಕದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುವುದು ಸುಲಭದ ಮಾತಲ್ಲ. ಇಲ್ಲಿ ನೆಲೆಯೂರಬೇಕಾದರೆ ಪ್ರತಿಭೆ, ಆಸಕ್ತಿ ಜತೆಗೆ ಅದೃಷ್ಟವೂ ಇರಬೇಕು. ಎಂತಹ ಪಾತ್ರವಾದರೂ ಸೈ ಎನ್ನುವ ನಟಿ ಮಣಿಯರಿಗೆ ಬಹಳ ಬೇಗ ಅವಕಾಶಗಳು ಸಿಗುತ್ತದೆ ಎಂಬ ಮಾತಿದೆ.ಆ ನಿಟ್ಟಿನಲ್ಲಿಯೇ ಪರಭಾಷಾ ನಟಿಯರು ಕೂಡ ತಮ್ಮ ಮೈ ಚಳಿ ಬಿಟ್ಟು ಅಭಿನಯಿಸಲು ಮುಂದೆ ಬರುತ್ತಾರೆ ಅನ್ನೋ ಮಾತಿದೆ. ಹಾಗೆ ಬಂದಂತಹ ತಾರೆಯರು ಎಷ್ಟು ಬೇಗ ಕಾಣಿಸುತ್ತಾರೋ ಅಷ್ಟೇ ಬೇಗ ಹೊರ ನಡೆಯುತ್ತಾರೆ. ಎಲ್ಲೋ ಒಂದು ಕಡೆ ಕನ್ನಡದ ಪ್ರತಿಭೆಗಳು ಬೋಲ್ಡ್ ಆಗಿ ಅಭಿನಯಿಸಲು ಹಿಂಜರಿಕೆ ಇದಕ್ಕೆ ಕಾರಣವೇ.

ಅದೇನೇ ಇರಲಿ ಎಂತಹ ಪಾತ್ರವಾದರೂ ಸರಿ ನಾನು ಅಭಿನಯಿಸಲು ಸಿದ್ಧ. ಬೋಲ್ಡ್ ಅಂಡ್ ಬ್ಯೂಟಿಫುಲ್ ಎನ್ನುತ್ತಾ ಸ್ಯಾಂಡಲ್‍ವುಡ್‍ನಲ್ಲಿ ಭದ್ರ ನೆಲೆಯನ್ನು ಕಾಣಲು ಬಂದಿರುವ ಹಾಸನದ ಬೆಡಗಿ ಶುಭರಕ್ಷಾ. ಈ ಬೆಡಗಿ ಈಗಾಗಲೇ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು, ಕೆಲವು ಚಿತ್ರಗಳಲ್ಲಿ ಪ್ರೇಕ್ಷಕರ ಎದೆ ಮಿಡಿತವನ್ನು ಝಲ್ಲೆನ್ನುವಂತೆ ಕೂಡ ಅಭಿನಯಿಸಿದ್ದಾರೆ.ಈಗಾಗಲೇ `ಬಳ್ಳಾರಿ ದರ್ಬಾರ್’ ಚಿತ್ರದ ಐಟಂ ಹಾಡೊಂದರಲ್ಲಿ ಕುಣಿದು ಕುಪ್ಪಳಿಸಿರುವ ಈ ಬೆಡಗಿ `ಗುಡುಗು’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.
ಈ ಚೆಲುವೆ ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲೂ ಕೂಡ ತನ್ನ ಅಭಿನಯದ ಝಲಕ್ ಅನ್ನ ತೋರಿಸಿದ್ದಾರಂತೆ.

ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಈ ಬೆಡಗಿ ಚಿತ್ರರಂಗದಲ್ಲಿ ತನ್ನನ್ನು ತಾನು ಚಿತ್ರಿಸಿಕೊಂಡು ಬೆಳೆಯಬೇಕೆಂಬ ಆಸೆಯನ್ನು ಹೊಂದಿದ್ದಾಳೆ.ಈಕೆ ಮಾಡಲಿಂಗ್ ಕ್ಷೇತ್ರದಲ್ಲೂ ಕೂಡ ತನ್ನ ಛಾಪನ್ನು ಮೂಡಿಸಿಕೊಂಡು ಹೆಜ್ಜೆ ಹಾಕುತ್ತಿದ್ದು, ಉತ್ತಮ ಅವಕಾಶಕ್ಕಾಗಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾಳೆ. ಈ ಮಾಯಾ ನಗರಿಯಲ್ಲಿ ಶುಭಾಗೆ ಯಾರು ರಕ್ಷೆ ನೀಡುತ್ತಾರೆ ಎಂಬುದನ್ನು ನೋಡಬೇಕಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin