ಬ್ಯಾಂಕುಗಳಲ್ಲಿ ಕನ್ನಡ ಕಲಿತು ಗ್ರಾಹಕರೊಂದಿಗೆ ವ್ಯವಹರಿಸಿ

ಈ ಸುದ್ದಿಯನ್ನು ಶೇರ್ ಮಾಡಿ

bank

ವಿಜಯಪುರ, ಮಾ.20- ಬ್ಯಾಂಕುಗಳಲ್ಲಿ ಕನ್ನಡಿಗ ಗ್ರಾಹಕರೇ ಇರುವುದರಿಂದ ಬ್ಯಾಂಕ್‍ನ ಸಿಬ್ಬಂದಿಗೆ ಕನ್ನಡ ಬಾರದಿದ್ದರೆ ಕಲಿತಾದರೂ ಕನ್ನಡದಲ್ಲಿಯೇ ವ್ಯವಹರಿಸಬೇಕಿದೆ ಎಂದು ಕೆನರಾಬ್ಯಾಂಕ್ ಸ್ಥಳೀಯ ಬ್ರಾಂಚ್‍ನ ಮುಖ್ಯಪ್ರಬಂಧಕ ಆರ್.ಶಿವಕುಮಾರ್ ಕರೆನೀಡಿದರು.ಪಟ್ಟಣದ ಕೆನರಾಬ್ಯಾಂಕಿನ ಪ್ರಾಂಗಣದಲ್ಲಿ ಕರ್ನಾಟಕ ಕನ್ನಡ ಅಭಿಮಾನಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಬ್ಯಾಂಕ್‍ನಿಂದ ಬ್ಯಾಂಕಿಗೆ ಕನ್ನಡಜ್ಯೋತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅನ್ಯಭಾಷೆ ಬಾರದ ಗ್ರಾಹಕರು ಸುಲಭವಾಗಿ ಆರ್ಥಿಕ ವ್ಯವಹಾರ ಮಾಡಲು ಬಂದಾಗ ಭಾಷೆಯೊಂದು ಅಡ್ಡಿಯಾಗಬಾರದು. ಆ ನಿಟ್ಟಿನಲ್ಲಿ ಉತ್ತಮಸೇವೆ ನೀಡುವತ್ತ ಕನ್ನಡದ ಬಗ್ಗೆ ಕಳಕಳಿಯ ಅಗತ್ಯವಿದೆ. ತಮ್ಮ ಭಾವನೆಗಳನ್ನು ಸ್ವಯಂ ಅಭಿವ್ಯಕ್ತಗೊಳಿಸಲು ಕನ್ನಡವೊಂದು ಉತ್ತಮ ಮಾಧ್ಯಮ, ತಾವೂ ಕನ್ನಡವನ್ನು ಕಲಿತು ಇತರರಿಗೂ ಕನ್ನಡವನ್ನು ಕಲಿಸುವ ಕಾರ್ಯವಾಗಬೇಕು ಎಂದು ಅವರು ತಿಳಿಸಿದರು.

ಇಲ್ಲಿನ ನೆಲ, ಜಲವನ್ನು ಅನುಭವಿಸುವ ನಾವು ಅನ್ಯಭಾಷಾ ಪ್ರೇಮಿಗಳಾಗಿ ಕನ್ನಡಕ್ಕೆ ಮೋಸಮಾಡಿದರೆ ಅದರಂತಹ ದ್ರೋಹ ಮತ್ತಾವುದೂ ಆಗುವುದಿಲ್ಲ ಎಂದು ಕರ್ನಾಟಕ ಕನ್ನಡ ಅಭಿಮಾನಿಗಳ ಸಂಘದ ಅಧ್ಯಕ್ಷ ಕನ್ನಡ ವಿ.ಆಂಜನಪ್ಪ ಅಭಿಪ್ರಾಯಪಟ್ಟರು.ಸಂಘದ ಟೌನ್ ಮಹಿಳಾ ಘಟಕದ ಅಧ್ಯಕ್ಷೆ ದೀಪಾ ಮಂಜುನಾಥ್, ಕೆನರಾಬ್ಯಾಂಕಿನ ಮ್ಯಾನೇಜರ್ ಇ.ಸಿ.ಕವಿತಾ, ಸಿಬ್ಬಂದಿ ವೆಂಕಟೇಶ್, ನಾರಾಯಣ್, ಸಮಂತ್, ಸಿದ್ಧಣ್ಣ, ನಮಿತಾ, ಹೇಮಾ, ಭಾರ್ಗವಿ, ಆದರ್ಶ್, ಗಿರಿಜ, ರಾಮು, ಕನ್ನಡ ಅಭಿಮಾನಿಗಳ ಸಂಘದ ಕಾರ್ಯದರ್ಶಿ ಮುನಿಯಪ್ಪ, ಮಹಿಳಾ ಘಟಕದ ರಾಧಮ್ಮ, ಎಂ.ಸತ್ಯಮ್ಮ, ರಮಾ, ಬ್ಯಾಂಕ್ ಗ್ರಾಹಕರು, ಮತ್ತಿತರರು ಇದ್ದರು. ಇದೇ ವೇಳೆ ಬ್ಯಾಂಕ್ ಸಿಬ್ಬಂದಿಗೆ ಕನ್ನಡ ರತ್ನಕೋಶಗಳನ್ನು ವಿತರಿಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin