ಬ್ಯಾಂಕ್’ಗಳಲ್ಲಿ ಶಾಯಿ ಹಾಕುವ ಸರ್ಕಾರದ ನಿರ್ಧಾರಕ್ಕೆ ಚುನಾವಣಾ ಆಯೋಗ ಆಕ್ಷೇಪ

ಈ ಸುದ್ದಿಯನ್ನು ಶೇರ್ ಮಾಡಿ

Bank-Shahi-Notes

ನವದೆಹಲಿ,ನ.18- ವಂಚನೆ ತಡೆಗಟ್ಟುವ ಉದ್ದೇಶದಿಂದ ಹೊಸ ಕರೆನ್ಸಿ ಪಡೆಯುವವರಿಗೆ ಶಾಯಿ ಹಾಕುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಚುನಾವಣಾ ಆಯೋಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.  ಕರೆನ್ಸಿ ವಿನಿಮಯ ಪತ್ತೆ ಮಾಡಲು ಅಳಿಸಲಾಗದ ಶಾಯಿಯನ್ನು ಬಳಸುತ್ತಿರುವುದರಿಂದ ಮುಂಬರುವ ಚುನಾವಣೆಗಳಲ್ಲಿ ತುಂಬ ಅನಾನುಕೂಲ ಮತ್ತು ತೊಂದರೆಯಾಗಲಿದೆ ಎಂದು ಚುನಾವಣಾ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.  ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದಿರುವ ಚುನಾವಣಾ ಆಯೋಗವು ಹಣ ವಿನಿಮಯಕ್ಕಾಗಿ ಬಳಸುತ್ತಿರುವ ಮಸಿಯಿಂದ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ವಿವರಿಸಿದೆ.

ನ.19ರಂದು(ನಾಳೆ) 5 ರಾಜ್ಯಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಈ ಸನ್ನಿವೇಶದಲ್ಲಿ ಬ್ಯಾಂಕ್‍ಗಳಿಂದ ನೋಟು ವಿನಿಮಯ ಮಾಡಿಕೊಂಡ ಗ್ರಾಹಕರ ಬೆರಳುಗಳಿಗೆ ಶಾಯಿ ಗುರುತು ಹಾಕುವುದರಿಂದ ಚುನಾವಣಾ ಪ್ರಕ್ರಿಯೆಗಳಿಗೆ ತೊಂದರೆಯುಂಟಾಗುತ್ತದೆ. ಮತದಾರರ ಬೆರಳಿಗೆ ಮಸಿ ಹಾಕಲು ಕಷ್ಟವಾಗುತ್ತದೆ ಎಂದು ಆಯೋಗವು ಪತ್ರದಲ್ಲಿ ಉಲ್ಲೇಖಿಸಿದೆ.
ಈ ರಾಜ್ಯಗಳಲ್ಲಿ ಚುನಾವಣೆ ವೇಳೆ ಈ ರೀತಿಯ ಸಮಸ್ಯೆಗಳು ಉದ್ಭವಿಸಿ ಗೊಂದಲವಾಗದಂತೆ ಸೂಕ್ತ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಆಯೋಗ ಮನವಿ ಮಾಡಿದೆ.
ಬ್ಯಾಂಕ್‍ಗಳು ಮತ್ತು ಅಂಚೆ ಕಚೇರಿಗಳಿಂದ ಹಣವನ್ನು ವಿನಿಮಯ ಮಾಡಿಕೊಳ್ಳುವಾಗ ಗ್ರಾಹಕರ ಬಲಗೈನ ತೋರುಬೆರಳಿಗೆ ಇಂಕ್ ಹಾಕಲಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಮತದಾನ ಸಂದರ್ಭದಲ್ಲಿ ಹಕ್ಕು ಚಲಾಯಿಸುವ ಮತದಾರರಿಗೆ ಮತ್ತೆ ಶಾಯಿ ಹಾಕಬೇಕಿರುವುದರಿಂದ ಗೊಂದಲಕ್ಕೆ ಕಾರಣವಾಗುತ್ತದೆ ಎಂದು ಆಯೋಗವು ಪತ್ರದಲ್ಲಿ ತಿಳಿಸಿದೆ.

ಶಂಕಾಸ್ಪದ ಠೇವಣಿದಾರರನ್ನು ನಿಯಂತ್ರಿಸಲು ಅಳಿಸಲಾಗದ ಶಾಯಿ ಬಳಸುವಾಗ ಚುನಾವಣಾ ನೀತಿಗಳನ್ನು ಸಹ ಕೇಂದ್ರ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಆಯೋಗವು ಕೋರಿದೆ. ಈ ಪತ್ರಕ್ಕೆ ಮುಖ್ಯ ಚುನಾವಣಾ ಆಯೋಗ ನಾಸೀಮ್ ಸಿಂಗಾನಿಯ ಸಹಿ ಮಾಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin