ಬ್ಯಾಂಕ್’ನ ಕ್ಯಾಷಿಯರ್ ಬಳಿ ಇತ್ತು 1 ಕೋಟಿ ಮೌಲ್ಯದ ಹಳೆ ನೋಟುಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Cash--01

ಹೈದರಾಬಾದ್, ಏ.7- ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ಯಾಷಿಯರ್ ಒಬ್ಬರು ಒಂದು ಕೋಟಿಗೂ ಅಧಿಕ ಹಳೆ ನೋಟುಗಳು ಅಕ್ರಮ ಬದಲಾವಣೆ ಮಾಡಿದ್ದನ್ನು ಸಿಬಿಐ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರದ ನೆಹರೂ ಗಂಜ್ ಬ್ರಾಂಚ್‍ನ ಎಸ್‍ಬಿಐ ಕ್ಯಾಷಿಯರ್ ಕೆ.ಶ್ರೀಹರಿ ಎಂಬಾತ 1.09 ಕೋಟಿ ಮೌಲ್ಯದ ರದ್ದಾದ 500, 1000 ರೂ. ನೋಟುಗಳನ್ನು ಅಕ್ರಮವಾಗಿ ಹೊಸ ನೋಟುಗಳಿಗೆ ಬದಲಾವಣೆ ಮಾಡಿದ್ದಾನೆ. ಇತರ ಖಾಸಗಿ ವ್ಯಕ್ತಿಗಳೊಂದಿಗೆ ಸೇರಿಕೊಂಡು ಶ್ರೀಹರಿ ಅಕ್ರಮ ಚಟುವಟಿಕೆ ಹಾಗೂ ಕ್ರಿಮಿನಲ್ ಸಂಚಿನಲ್ಲಿ ಭಾಗಿಯಾಗಿರುವುದು ಖಚಿತಪಟ್ಟಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್ 8ರಂದು 500, 1000 ರೂ. ನೋಟುಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿತ್ತು. ಇದಾದ ಕೆಲ ದಿನಗಳ ಅಂತರದಲ್ಲೇ ಅಂದ್ರೆ, ನವೆಂಬರ್ 10 ಹಾಗೂ 30ರೊಳಗೆ 1 .09 ಕೋಟಿ ರೂ. ವಿನಿಮಯು ಮಾಡಲಾಗಿದೆ. ಆರ್‍ಬಿಐ ನಿಯಮಗಳನ್ನು ಉಲ್ಲಂಘಿಸಿ ಸ್ವಾಪ್ ಮೂಲಕ ಅಕ್ರಮವಾಗಿ ನೋಟು ಬದಲಾವಣೆ ನಡೆದಿದೆ. ಕ್ಯಾಷಿಯರ್ ಕೆ.ಶ್ರೀಹರಿ ಹಾಗೂ ಮತ್ತಿತರರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin