ಬ್ಯಾಂಕ್‍ನಲ್ಲಿ ಸಾಲ ಕೊಡಿಸೋದಾಗಿ ಯಾಮಾರಿಸುತ್ತಿದ್ದ ಕಿಲಾಡಿ ವಂಚಕಿಗೆ ಧರ್ಮದೇಟು ( ವಿಡಿಯೋ)

ಈ ಸುದ್ದಿಯನ್ನು ಶೇರ್ ಮಾಡಿ


ತುಮಕೂರು, ಫೆ.6- ಬ್ಯಾಂಕ್‍ನಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯರಿಗೆ ಪಂಗನಾಮ ಹಾಕುತ್ತಿದ್ದ ಕಿಲಾಡಿ ವಂಚಕಿಯನ್ನು ಮಹಿಳೆಯರೇ ಹಿಡಿದು ಮೆರವಣಿಗೆ ಮಾಡಿ ಪೊಲೀಸರಿಗೆ ಒಪ್ಪಿಸಿರುವ ಪ್ರಸಂಗ ಶಿರಾ ಗೇಟ್‍ನಲ್ಲಿ ನಡೆದಿದೆ. ಪುಷ್ಪಾ ಎಂಬ ಮಹಿಳೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ಬಳಿ ಬಣ್ಣದ ಮಾತುಗಳನ್ನಾಡಿ ನಿಮಗೆ ಎಸ್‍ಬಿಐ ಬ್ಯಾಂಕ್‍ನಿಂದ ಸಾಲ ಕೊಡಿಸುತ್ತೇನೆ. ಇದರಿಂದ ನಿಮ್ಮ ಬದುಕು ಉಜ್ವಲವಾಗುತ್ತದೆ ಎಂದು ನಂಬಿಸಿ ಸುಮಾರು ಒಂದು ವರ್ಷದಿಂದ ಪ್ರತಿಯೊಬ್ಬ ಮಹಿಳೆಯರ ಬಳಿ 3 ರಿಂದ 4 ಸಾವಿರ ಹಣ ಪಡೆಯುತ್ತಿದ್ದರು.

ಮಹಿಳೆಯರು ನೀಡಿದ ಹಣದ ಮೊತ್ತ ಜಾಸ್ತಿಯಾಗಿದ್ದು, ನಮyoಗೆ ಸಾಲವಾದರೂ ಕೊಡಿಸಿ, ಇಲ್ಲವಾದರೆ ನಾವು ಕೊಟ್ಟಿರುವ ಹಣ ವಾಪಸ್ ನೀಡಿ ಎಂದು ಪಟ್ಟು ಹಿಡಿದಾಗ ಈಕೆ ಅವರನ್ನು ವಂಚಿಸುತ್ತಿರುವುದು ತಿಳಿದುಬಂದಿದೆ. ಕೂಡಲೇ ಈಕೆಯನ್ನು ಹಿಡಿದು ಬೀದಿಗಳಲ್ಲಿ ಮೆರವಣಿಗೆ ಮಾಡಿಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಡಿವೈಎಸ್ಪಿ ನಾಗರಾಜ್, ವೃತ್ತ ನಿರೀಕ್ಷಕ ಚಂದ್ರಶೇಖರ್ ಹಾಗೂ ನಗರ ಠಾಣೆ ಸಬ್‍ಇನ್ಸ್‍ಪೆಕ್ಟರ್ ವಿಜಯ್‍ಕುಮಾರ್ ವಂಚಕಿಯನ್ನು ವಿಚಾರಣೆಗೊಳಪಡಿಸಿದ್ದಾರೆ.  ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin