ಬ್ಯಾಂಕ್‍ನ ಅಭಿವೃದ್ಧಿಗೆ ಸಂತಸ

ಈ ಸುದ್ದಿಯನ್ನು ಶೇರ್ ಮಾಡಿ

syndicate--bank

ಚನ್ನಪಟ್ಟಣ, ಅ.22- ಶಾಖೆಯ ಎರಡು ವರ್ಷದ ಅಭಿವೃದ್ದಿ ಸಂತಸ ತಂದಿದೆ. ಗ್ರಾಹಕರು ಮುಂದಿನ ದಿನಗಳಲ್ಲಿ ಬ್ಯಾಂಕ್‍ಗೆ ಇದೇ ರೀತಿಯ ಸಹಕಾರ ನೀಡುವಂತೆ ಸಿಂಡಿಕೇಟ್ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಲೋಕೇಶ್ ತಿಳಿಸಿದರು.ಸಿಂಡಿಕೇಟ್ ಬ್ಯಾಂಕ್ ಶಾಖೆಯ ಎರಡನೇ ವರ್ಷದ ವಾರ್ಷಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್‍ನ ಗ್ರಾಹಕರು ತಮ್ಮ ಅನಿಸಿಕೆ ಮತ್ತು ಸಲಹೆಗಳನ್ನು ನೀಡಲು ಮುಕ್ತ ಅವಕಾಶ ನೀಡಿದರು. ಗ್ರಾಹಕರು ಕೆಲವು ಅಮೂಲ್ಯವಾದ ಸಲಹೆ ಮತ್ತು ಹೆಚ್ಚಿನ ಅಭಿವೃದ್ದಿಯ ಬಗ್ಗೆ ಸಲಹೆಗಳನ್ನು ನೀಡುತ್ತಾ ಅಭಿನಂದೆನೆ ಸಲ್ಲಿಸಿದರು.ಈ ಸಮಯದಲ್ಲಿ ಪ್ರಧಾನ ಮಂತ್ರಿ ಸ್ವಸ್ಥಭೀಮಾ ಯೋಜನೆಯ ಶಾಖೆಯ ಮೊದಲ ಫಲಾನುಭವಿಯ ಉಮಾದೇವಿರವರಿಗೆ ಪರಿಹಾರದ ಚೆಕ್ಕನ್ನು ವಿತರಿಸಲಾಯಿತು.ಬ್ಯಾಂಕಿನ ಸಿಬ್ಬಂದಿಗಳು ಹಾಗೂ ಗ್ರಾಹಕರಾದ ಎ.ಎನ್.ಬಾಲು, ಜಯಸಿಂಹ ಹಾಗೂ ಮುಂತಾದವರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin