ಬ್ಯಾಂಕ್‍ ನೋಟಿಸ್ ಗೆ ಹೆದರಿ ರೈತ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Former-Suicide-00

ಬೆಳಗಾವಿ, ಮಾ.21- ಬ್ಯಾಂಕ್‍ನಿಂದ ನೀಡಿದ್ದ ನೋಟಿಸ್‍ಗೆ ಹೆದರಿ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮದಿಹಳ್ಳಿ ಗ್ರಾಮದ ನಿವಾಸಿ ವಿಠ್ಠಲ ತಪಸಿ (45) ಆತ್ಮಹತ್ಯೆಗೆ ಶರಣಾದ ರೈತ. ಇವರು ಬೆಳೆ ಬೆಳೆಯಲೆಂದು 6 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಹುಕ್ಕೇರಿ ಪಟ್ಟಣದ ಎಸ್‍ಬಿಐ ಬ್ಯಾಂಕ್‍ನಿಂದಲೂ ಸಾಲ ಮಾಡಿದ್ದರು. ಕಳೆದ ಫೆಬ್ರವರಿ 10ರಂದು 3 ಲಕ್ಷ ಸಾಲ ಮರುಪಾವತಿಸುವಂತೆ ನೋಟಿಸ್ ನೀಡಿದ್ದರು. ಆದರೆ, ಸಾಲ ತೀರಿಸಲಾಗದೆ ನೋಟಿಸ್‍ಗೆ heಜಚಿಡಿi ತಮ್ಮ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin