ಬ್ಯಾಂಕ್‍, ಮೊಬೈಲ್’ಗೆ ಆಧಾರ್ ಲಿಂಕ್ ವಿಚಾರ : ಸದ್ಯಕ್ಕೆ ಸಿಹಿಸುದ್ದಿ ಕೊಟ್ಟ ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

Adhaar--002

ನವದೆಹಲಿ, ಮಾ.13-ಬ್ಯಾಂಕ್‍ಗಳು, ಮೊಬೈಲ್ ಫೋನ್‍ಗಳು ಹಾಗೂ ಸರ್ಕಾರದ ಸವಲತ್ತುಗಳನ್ನು ಪಡೆಯಲು ಆಧಾರ್ ಕಾರ್ಡ್ ಸಂಖ್ಯೆ ಸಂಪರ್ಕ ಮಾಡುವ ಗಡುವನ್ನು ಸುಪ್ರೀಂಕೋರ್ಟ್ ಇಂದು ಅನಿರ್ದಿಷ್ಟಾವಧಿವರೆಗೆ ವಿಸ್ತರಿಸಿದೆ.   ಮಾರ್ಚ್ 31ರ ಒಳಗೆ ಆಧಾರ್ ಸಂಖ್ಯೆಯನ್ನು ಸಂಪರ್ಕಗೊಳಿಸಬೇಕೆಂಬ ಕೇಂದ್ರದ ಗಡುವು ಈಗ ವಿಸ್ತರಣೆಯಾಗಿದ್ದು ಸಾಮಾನ್ಯ ಜನರಿಗೆ ಬಿಗ್ ರಿಲೀಫ್ ಆಗಿದೆ.  ಈ ವಿಷಯದ ಬಗ್ಗೆ ಸುಪ್ರೀಂಕೋರ್ಟ್‍ನ ಸಂವಿಧಾನಪೀಠ ಮುಂದಿನ ನಿರ್ಧಾರ ಕೈಗೊಳ್ಳುವ ತನಕ ಅನಿರ್ದಿಷ್ಟಾವಧಿಗೆ ಗಡುವನ್ನು ವಿಸ್ತರಿಸಲಾಗಿದೆ. ಇಂದು ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಸಂಬಂಧ ನ್ಯಾಯಾಲಯ ಮುಂದಿನ ಆದೇಶ ಹೊರಡಿಸುವ ತನಕ ಹಳೆಯ ವ್ಯವಸ್ಥೆಯೇ ಮುಂದುವರಿಯಲಿದೆ ಎಂದು ತಿಳಿಸಿದೆ.

Facebook Comments

Sri Raghav

Admin