ಬ್ಯಾಂಕ್ ನೌಕರ ಆತ್ಮಹತ್ಯೆ : ಆಸ್ತಿಗಾಗಿ ಹೆಣದ ಮುಂದೆ ಪತ್ನಿಯರ ರಂಪಾಟ
ಚನ್ನಪಟ್ಟಣ, ಅ.23– ಕೌಟುಂಬಿಕ ಕಲಹದಿಂದ ಬೇಸತ್ತ ಬ್ಯಾಂಕ್ ನೌಕರನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಕ್ಕೂರು ಪೊಲೀಸ್ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬ್ಯಾಂಕ್ ನೌಕರ ಶಿವಣ್ಣ (53) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.b ಕೋಡಂಬಳ್ಳಿ ಗ್ರಾಮದ ಈತ ರಾಮನಗರ ಕೆನರಾ ಬ್ಯಾಂಕ್ನಲ್ಲಿ ಡಿ ಗ್ರೂಪ್ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದನು. ಮೊದಲನೆಯ ಪತ್ನಿ ಮಡಿದ ನಂತರ ಎರಡನೇ ವಿವಾಹವಾಗಿದ್ದನು. ಆದರೆ ಕೌಟುಂಬಿಕ ಕಲಹದಿಂದ ಮನನೊಂದಿದ್ದ ಎನ್ನಲಾಗಿದೆ. ಈ ಪ್ರಕರಣದ ಬಗ್ಗೆ ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್ಐ ಸದಾನಂದ ಮೃತ ದೇಹದಲ್ಲಿ ಮರಣೋತ್ತರ ಪರೀಕ್ಷೆಯನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಲಾಯಿತು.
ಹೆಣದ ಮುಂದೆ ನೌಕರಿಗಾಗಿ ರಂಪಾಟ:
ಹೆಣದ ಮುಂದೆಯೇ ಮೊದಲನೆಯ ಪತ್ನಿಯ ಮಕ್ಕಳು ಸಂಬಂಧಿಕರು ಹಾಗೂ ಎರಡನೆಯ ಪತ್ನಿಯ ಕಡೆಯವರು ಗಲಾಟೆ ಮಾಡಿಕೊಂಡ ಘಟನೆಯು ನಡೆದಿದೆ ಎನ್ನಲಾಗಿದೆ.
ಮೊದಲನೆಯ ಪತ್ನಿ ಮಕ್ಕಳು ವಯಸ್ಕರಾಗಿದ್ದು ತಂದೆಯ ಅಂತ್ಯಕ್ರಿಯೆ ಹಾಗೂ ಆತ ಆಸ್ತಿಯ ಬಗ್ಗೆ ಇಬ್ಬರು ಪತ್ನಿಯರ ಮಕ್ಕಳು ರಂಪಾಟ ಮಾಡಿದರು. ಮಧ್ಯೆ ಪ್ರವೇಶಿಸಿದ ಅಕ್ಕೂರು ಪೊಲೀಸರು ಮೊದಲು ಮೃತ ದೇಹದ ಮರಣೋತ್ತರ ನಡೆಯಲಿ ನಂತರ ನಿಮ್ಮ ವ್ಯವಹಾರ ಮಾಡಿಕೊಳ್ಳಿ ಎಂದು ಎರಡು ಕಡೆಯವರಿಗೂ ಸಮಾಧಾನ ಪಡಿಸಿದ್ದಾರೆ.
► Follow us on – Facebook / Twitter / Google+