ಬ್ಯಾಂಕ್ ಲೋನ್ ಕಟ್ಟಿಕೊಳ್ಳುವುದಾಗಿ ವಾಹನ ಮಾಲೀಕರಿಗೆ ವಂಚಿಸುತ್ತಿದ್ದ ಮೂವರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Crime--01

ಬೆಂಗಳೂರು, ಡಿ.30- ಬ್ಯಾಂಕ್ ಲೋನ್ ಕಟ್ಟಿಕೊಳ್ಳುವುದಾಗಿ ವಾಹನ ಮಾಲೀಕರನ್ನು ನಂಬಿಸಿ ಕಾರುಗಳನ್ನು ಪಡೆದು ಬ್ಯಾಂಕ್ ಮತ್ತ್ತು ಮಾಲೀಕರಿಗೆ ವಂಚನೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉತ್ತರ ವಿಭಾಗದ ಯಶವಂತಪುರ ಠಾಣೆ ಪೊಲೀಸರು ಬಂಧಿಸಿ ನಾಲ್ಕು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ನಾಗರಾಜ (32), ಗಿರೀಶ್ (31), ಲೋಕೇಶ್ (37) ಮತ್ತು ಅರವಿಂದ ಗೌಡ (41) ಬಂಧಿತ ವಂಚಕರು.

ಆರೋಪಿಗಳಿಂದ ಮಹೀಂದ್ರ ಕೆಯುವಿ ಕಾರು, ಮಾರುತಿ ಓಮ್ನಿ ಕಾರು, ಮರ್ಸಿಡಿಸ್ ಬೆಂಜ್ ಕಾರು ಮತ್ತು ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಯಶವಂತಪುರ ನಿವಾಸಿಯಾದ ಪ್ರಸನ್ನ ವೆಂಕಟೇಶ್ ಎಂಬುವರು ಕಳೆದ ಜನವರಿಯಲ್ಲಿ ಮಹೀಂದ್ರ ಕೆಯುವಿ ಕಾರನ್ನು ಖರೀದಿ ಮಾಡಿ ಚಾಲಕ ಮಂಜುನಾಥ್ ಎಂಬುವನಿಗೆ ಬಾಡಿಗೆಗೆ ಓಡಿಸಲು ತಿಂಗಳಿಗೆ 15 ಸಾವಿರ ರೂ. ಗುತ್ತಿಗೆ ಆಧಾರದ ಮೇಲೆ ಕಾರು ಮತ್ತು ಅದರ ಅಸಲಿ ದಾಖಲಾತಿಗಳನ್ನು ನೀಡಿದ್ದರು.

ಆದರೆ, ವಂಚಕ ಮಂಜುನಾಥ್ ಈ ಗುತ್ತಿಗೆಯನ್ನು ದುರುಪಯೋಗಪಡಿಸಿಕೊಂಡು ಮಾಲೀಕರಿಗೆ ಕಾರನ್ನು ವಾಪಸ್ ನೀಡದೆ ಬ್ಯಾಂಕ್‍ಗೆ ಸಾಲವನ್ನೂ ಮರುಪಾವತಿ ಮಾಡದೆ ಮೋಸ ಮಾಡಿ ತಲೆಮರೆಸಿಕೊಂಡಿದ್ದನು. ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಪ್ರಕರಣ ಸಂಬಂಧ ಮೂವರನ್ನು ಬಂಧಿಸಿ ನಾಲ್ಕು ಕಾರುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಂಧನದಿಂದ ಯಶವಂತಪುರ ಮತ್ತು ಬಗಲಗುಂಟೆಯ ತಲಾ ಒಂದೊಂದು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಯಶವಂತಪುರ ಉಪವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ರವಿಪ್ರಸಾದ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ವೈ.ಮುದ್ದರಾಜ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

Facebook Comments

Sri Raghav

Admin