ಬ್ಯಾಡ್ಮಿಂಟನ್ : 2ನೆ ಪಂದ್ಯದಲ್ಲಿ ಶ್ರೀಕಾಂತ್ ಗೆಲುವು

ಈ ಸುದ್ದಿಯನ್ನು ಶೇರ್ ಮಾಡಿ

shreekant

ರಿಯೋ ಡಿ ಜನೈರೋ, ಆ.12- ವಿಶ್ವದ 11ನೆ ಕ್ರಮಾಂಕದ ಆಟಗಾರ ಭಾರತದ ಕಿಡಾಂಬಿ ಶ್ರೀಕಾಂತ್, ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್‍ನ ಎರಡನೆ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ.  ಇಲ್ಲಿ ನಡೆದ ಪಂದ್ಯದಲ್ಲಿ ಮೆಕ್ಸಿಕೋದ ಪ್ರತಿಸ್ಪರ್ಧಿ ಲಿನೋ ಮುನೋಯ್ ಅವರನ್ನು 21-11, 21-17 ಸೆಟ್‍ಗಳಿಂದ ಮಣಿಸುವಲ್ಲಿ ಶ್ರೀಕಾಂತ್ ಸಫಲರಾದರು. ಆರಂಭದಲ್ಲಿ ಮೆಕ್ಸಿಕೋ ಆಟಗಾರರಿಂದ ಪ್ರಬಲ ಪೈಪೋಟಿ ಎದುರಿಸಿದ ಶ್ರೀಕಾಂತ್ ಆನಂತರ ಚೇತರಿಸಿಕೊಂಡು ಮುನೋಯ್‍ರನ್ನು ಮಣಿಸಿದರು.

 

Facebook Comments

Sri Raghav

Admin