ಬ್ಯಾಲೆಟ್ ಬದಲು ಬುಲೆಟ್ ಪಾಲಿಟಿಕ್ಸ್ ಮಾಡುತ್ತಿದೆ ಕಾಂಗ್ರೆಸ್ : ಜಾವಡೇಕರ್ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Prakash

ಚಿತ್ರದುರ್ಗ, ಫೆ.10-ಕಾಂಗ್ರೆಸ್ ಪಕ್ಷ ಬ್ಯಾಲೆಟ್ ಪಾಲಿಟಿಕ್ಸ್ ಬದಲು ಬುಲೆಟ್ ಪಾಲಿಟಿಕ್ಸ್ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡ್ಕೇರ್ ಇಂದಿಲ್ಲಿ ವಾಗ್ದಾಳಿ ನಡೆಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸರ್ಕಾರ ಕೊಲೆಗಳ ರಾಜಕೀಯ ಮಾಡುತ್ತಿದೆ. ನಮ್ಮ ಪಕ್ಷದ ಶಾಸಕ ಸಿ.ಟಿ.ರವಿ ಸದನದಲ್ಲಿ ರಾಜ್ಯದಲ್ಲಿನಡೆದಿರುವ ಸರಣಿ ಕೊಲೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮುಂದೆ ಯಾರ ಕೊಲೆಯಾಗುತ್ತದೆ ಎಂದು ಕೇಳಿದ್ದಾರೆ. ಈ ವೇಳೆ ಸದನದಲ್ಲೇ ಸಚಿವರೊಬ್ಬರು ನೆಕ್ಸ್ಟ್ ಸಿ.ಟಿ.ರವಿ ಎಂದು ಹೇಳುವ ಮೂಲಕ ಬೆದರಿಕೆವೊಡ್ಡುತ್ತಿದ್ದಾರೆ. ಇದೊಂದು ಸರ್ಕಾರವೇ? ಎಂದು ಕಿಡಿಕಾರಿದರು.
ಈ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ನಮ್ಮ ಪಕ್ಷದ ಕಾರ್ಯಕರ್ತರನ್ನು ಕೊಲೆ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಈ ಮೂಲಕ ಬುಲೆಟ್ ಪಾಲಿಟಿಕ್ಸ್ ಮಾಡುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.

ಚಹಾ ಮಾರುವವರು ಪ್ರಧಾನಿಯಾಗುವುದು, ಬಡ, ದಲಿತ ಕುಟುಂಬದಿಂದ ಬಂದ ವ್ಯಕ್ತಿ ರಾಷ್ಟ್ರಪತಿಯಾಗುವುದು, ರೈತ ಕುಟುಂಬದಿಂದ ಬಂದ ವ್ಯಕ್ತಿ ಉಪರಾಷ್ಟ್ರಪತಿಯಾಗುವುದು ಬಿಜೆಪಿಯಿಂದ ಮಾತ್ರ ಸಾಧ್ಯ. ಮತ್ಯಾವ ಪಕ್ಷದಿಂದಲೂ ಇದು ಸಾಧ್ಯವಿಲ್ಲ ಎಂದು ಹೇಳಿದರು. ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಉಳಿದಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದ್ದು, ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣವಾಗಲಿದೆ ಎಂದು ಹೇಳಿದರು.

ಸಬ್ ಸಾತ್, ಸಬ್ ಕಾ ವಿಕಾಸ್ ನಮ್ಮ ಸಂಸ್ಕøತಿ. ಕೌಟುಂಬಿಕ ರಾಜಕಾರಣ ಕಾಂಗ್ರೆಸ್‍ನ ಸಂಸ್ಕøತಿ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಸರ್ಕಾರಕ್ಕೆ 10 ಪರ್ಸೆಂಟ್ ಸರ್ಕಾರ ಎಂದಿದ್ದಾರೆ. ಆದರೆ ರಾಜ್ಯದ ಜನ 10 ಪರ್ಸೆಂಟ್ ಅಲ್ಲ, 30 ಪರ್ಸೆಂಟ್ ಸರ್ಕಾರ ಎನ್ನುತ್ತಿದ್ದಾರೆ. ಇದರಲ್ಲೇ ಗೊತ್ತಾಗುತ್ತಿದೆ ಜನರಿಗೆ ಕಾಂಗ್ರೆಸ್ ಬಗೆಗಿನ ಅಭಿಮಾನ ಎಂದು ವ್ಯಂಗ್ಯವಾಡಿದರು.   ಕೇಂದ್ರ ಸರ್ಕಾರ ನೀಡಿದ ಯೋಜನೆಗಳನ್ನು ರಾಜ್ಯಸರ್ಕಾರದ ಯೋಜನೆಗಳೆಂದು ಹೇಳಿಕೊಳ್ಳುತ್ತಿದ್ದಾರೆ. ಅನ್ನಭಾಗ್ಯ ಯೋಜನೆ ಕಾಂಗ್ರೆಸ್ ಅನ್ನಭಾಗ್ಯವಲ್ಲ. ಹೀಗೆ ಎಲ್ಲವನ್ನೂ ತನ್ನದೆಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳಿಕೊಳ್ಳುತ್ತಿದೆ ಎಂದು ಟೀಕಿಸಿದರು.   ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯವರ ರ್ಯಾಲಿ ಐತಿಹಾಸಿಕವಾಗಲಿದೆ. ಕರ್ನಾಟಕದಲ್ಲಿ ಹೊಸ ಭರವಸೆ ಮೂಡಿಸಿದೆ.

Facebook Comments

Sri Raghav

Admin