‘ಬ್ಯೂಟಿಫುಲ್ ಮನಸುಗಳು’ ಚಿತ್ರದಲ್ಲಿ ಸತೀಶ್’ಗೆ ಜೋಡಿಯಾಗಿ ಶೃತಿ

ಈ ಸುದ್ದಿಯನ್ನು ಶೇರ್ ಮಾಡಿ

Beutifull

ನಟ ನೀನಾಸಂ ಸತೀಶ್ ಮತ್ತು ಮಲೆಯಾಳಿ ಬೆಡಗಿಯಾದ ಶೃತಿ ಹರಿಹರನ್ ಲೂಸಿಯಾ ಚಿತ್ರದ ನಂತರ ಬಹಳ ದಿನಗಳಾದ ಮೇಲೆ ಜೊತೆಯಾಗಿ ಕಾಣಿಸಿಕೊಂಡಿರುವ ಚಿತ್ರ ಬ್ಯೂಟಿಫುಲ್ ಮನಸುಗಳು. ಈ ಹಿಂದೆ ಒಲವೇ ಮಂದಾರ, ಟೋನಿ, ಬುಲೆಟ್ ಬಸ್ಯ ಚಿತ್ರಗಳಿಗೆ ಆ್ಯಕ್ಷನ್-ಕಟ್ ಹೇಳುವುದರ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಒಬ್ಬ ಸಕ್ಸಸ್‍ಫುಲ್ ನಿರ್ದೇಶಕ ಎನಿಸಿಕೊಂಡಿರುವ ನಿರ್ದೇಶಕ ಜಯತೀರ್ಥ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಬ್ಯೂಟಿಫುಲ್ ಮನಸುಗಳು ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಕಳೆದವಾರ ಬೆಂಗಳೂರಿನ ಈಟಿಏ ಮಾಲ್‍ನಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡವು.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬ್ಯೂಟಿಫುಲ್ ಮನಸುಗಳು ಚಿತ್ರದ ಧ್ವನಿಸುರುಳಿಗಳನ್ನು ಹೊರತಂದರು. ಇದೇ ಸಂದರ್ಭದಲ್ಲಿ ನಟ ದರ್ಶನ್, ಈ ಚಿತ್ರದ ಬಗ್ಗೆ ಮತ್ತು ಹಾಡುಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರಲ್ಲದೆ, ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ಗಾಂಧಿನಗರಕ್ಕೆ ಪರಿಚಯವಾದ ಸಂಗೀತ ನಿರ್ದೇಶಕ ಬಿ.ಜೆ ಭರತ್ ಬ್ಯೂಟಿ ಫುಲ್ ಮನಸುಗಳು ಸಿನೆಮಾಗೆ ಸಂಗೀತ ಹಾಗೂ ಹಿನ್ನೆಲೆ ಸಂಗೀತ  ಚಿತ್ರದ ಹಾಡಿನ ಬಗ್ಗೆ ಮಾತನಾಡುತ್ತ ಚಿತ್ರತಂಡ, ಚಿತ್ರದಲ್ಲಿ ಒಂದೇ ಹಾಡಿದ್ದರೂ, ಅದು ಎರಡು ವಿಭಿನ್ನ ಶೈಲಿಯಲ್ಲಿ ಮೂಡಿ ಬಂದಿದೆ. ಇದರ ಜೊತೆಯಲ್ಲಿಯೇ ಹಿನ್ನಲೆಯಲ್ಲಿ ಚಿತ್ರದ ಥೀಮ್ ಸಾಂಗ್ ಓಡುತ್ತಿರುತ್ತದೆ. ಸ್ಕ್ರಿಪ್ಟ್‍ಗೆ ಅಗತ್ಯವಿದ್ದದ್ದು ಕೇವಲ ಒಂದು ಹಾಡು ಹಾಗಾಗಿ ಒಂದೇ ಸಾಂಗ್ ಬಳಸಿಕೊಂಡಿದ್ದೇವೆ ಎಂದರು.

ನಿರ್ಮಾಪಕ ಪ್ರಸನ್ನ ಕುಮಾರ್, ತಮ್ಮ ಸ್ಕಂದ ಎಂಟರ್‍ಟೈನರ್ಸ್ ಬ್ಯಾನರ್‍ನಡಿಯಲ್ಲಿ ಬ್ಯೂಟಿಫುಲ್ ಮನಸುಗಳು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಹಿಂದೆ ನೀರ್‍ದೋಸೆ ಚಿತ್ರವನ್ನು ಕೂಡ ನಿರ್ಮಿಸಿದ್ದ ಪ್ರಸನ್ನ ಅವರ ಬ್ಯಾನರ್‍ನಿಂದ ಹೊರಬರುತ್ತಿರುವ ಎರಡನೇ ಚಿತ್ರವಿದು. ಈ ಚಿತ್ರಕ್ಕೆ ಕಿರಣ್ ಹಂಪಾಪುರ ಅವರ ಛಾಯಾಗ್ರಹಣವಿದೆ.ಇದೇ ಜೋಶ್‍ನಲ್ಲಿರುವ ಬ್ಯೂಟಿಫುಲ್ ಮನಸುಗಳು ಚಿತ್ರತಂಡ ಬರುವ ನವೆಂಬರ್ ವೇಳೆಗೆ ಚಿತ್ರವನ್ನು ತೆರೆಯ ಮೇಲೆ ತರುವ ಯೋಜನೆಯನ್ನು ಹಾಕಿಕೊಂಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin