ಬ್ರಹ್ಮರಥೋತ್ಸವಕ್ಕೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

kr-pete-2

ಕೆ.ಆರ್.ಪೇಟೆ, ಫೆ.13- ಮುಜರಾಯಿ ಇಲಾಖೆಗೆ ಸೇರಿದ ತಾಲೂಕಿನ ಅಕ್ಕಿಹೆಬ್ಬಾಳಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.
ತಹಶೀಲ್ದಾರ್ ಕೆ.ರತ್ನಾ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಶ್ರೀಲಕ್ಷ್ಮೀನರಸಿಂಹ ಉಘೇ ಉಘೇ ಎಂಬ ಜಯಘೋಷ ಕೂಗಿ ರಥ ಎಳೆದು ಭಕ್ತಿ ಸಮರ್ಪಿಸಿದರು. ಸಂಪ್ರದಾಯ ಹಾಗೂ ಪ್ರತೀತಿಯಂತೆ ಗರುಡ ಪಕ್ಷಿ ಶ್ರೀರಥದ ಮೇಲ್ಭಾಗ ಆಗಸದಲ್ಲಿ ದೇವಾಲಯದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಿ ನಮನ್ನ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಕನ್ನಡ ಸಂಸ್ಕೃತಿ  ಇಲಾಖೆಯ ನಿವೃತ್ತ ರಿಜಿಸ್ಟ್ರಾರ್ ಎ.ಎಸ್.ನಾಗರಾಜು, ಸಮಾಜ ಸೇವಕ ಎ.ಆರ್.ರಘು, ಜಿ.ಪಂ. ಸದಸ್ಯ ದೇವರಾಜು, ತಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀಸ್ವಾಮಿನಾಯಕ್, ದೇವಾಲಯ ಧರ್ಮದರ್ಶಿ ಸಮಿತಿಯ ಸಂಚಾಲಕ ರಮೇಶ್, ರಂಗಕರ್ಮಿ ಶಶಿಧರ ಭಾರೀಘಾಟ್ ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin