ಬ್ರಿಟನ್‍ನಲ್ಲಿ ಭಾರತದ ಬಾಣಸಿಗನಿಗೆ ಸಿಕ್ತು 1 ಲಕ್ಷ ಟಿಪ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

Indian-Tips

ಬ್ರಿಟನ್, ಜ.14- ಬ್ರಿಟನ್‍ನಲ್ಲಿ ಭಾರತದ ರುಚಿಯಾದ ಸ್ಪೈಸಿ ತಿನಿಸುಗಳಿಗೆ ಬಹಳ ಬೇಡಿಕೆ ಇದೆ.  ಉತ್ತರ ಐರ್ಲೆಂಡ್‍ನಲ್ಲಿರುವ ಭಾರತೀಯ ರೆಸ್ಟೋರೆಂಟ್‍ವೊಂದರಲ್ಲಿ ಭೂರಿ ಭೋಜನ ಮಾಡಿ ಫುಲ್ ಖುಷಿಯಾಗಿದ್ದ ಗ್ರಾಹಕನೊಬ್ಬ ಸುಮಾರು ಒಂದು ಲಕ್ಷ ರೂ. ಟಿಪ್ಸ್ ಕೊಟ್ಟಿದ್ದಾನೆ. ಫೋರ್ಟೋಡೌನ್‍ನಲ್ಲಿರುವ ಇಂಡಿಯನ್ ಟ್ರೀ ಹೆಸರಿನ ರೆಸ್ಟೋರೆಂಟ್‍ನಲ್ಲಿ ಗ್ರಾಹಕ ಒಂದು ಸಾವಿರ ಯೂರೋಸ್‍ಅನ್ನು ಟಿಪ್ಸ್ ರೂಪದಲ್ಲಿ ಕೊಟ್ಟಿದ್ದು ನೋಡಿ ಹೊಟೇಲ್ ಮಾಲೀಕ ಹಾಗೂ ಸಿಬ್ಬಂದಿಗಳು ಬೆಕ್ಕಸ ಬೆರಗಾಗಿದ್ದಾರೆ. ಆದರೆ, ಈ ಕ್ರೆಡಿಟ್ ಬಾಣಸಿಗನಿಗೆ ಸೇರಬೇಕು. ಏಕೆಂದರೆ ಅವರ ಕೈ ರುಚಿ ಅಷ್ಟು ಅದ್ಭುತವಾಗಿದೆ ಎನ್ನುತ್ತಾರೆ ಗ್ರಾಹಕರು.

ಒಂದು ಸಾವಿರ ಯೂರೋಸ್ ಟಿಪ್ಸ್ ಕೊಟ್ಟ ಉದ್ಯಮಿ ಉದ್ಯಮಿ ಹೊಟೇಲ್‍ನ ಡೈರೆಕ್ಟರ್ ಲೂನಾ ಎಕೂಚ್ ಹಾಗೂ ಬಾಣಸಿಗ ಬಾಬುಗೆ ನೋಟ್ಸ್‍ವೊಂದನ್ನು ಬಿಟ್ಟು ಹೋಗಿದ್ದಾರೆ.
ಆದ್ಭುತ ಊಟ ಬಡಿಸಿದ ನಿಮಗೆ ಚಿಕ್ಕದೊಂದು ಉಡುಗೊರೆ ಇದು. ರೆಸ್ಟೋರೆಂಟ್‍ಗೆ ಇದರಿಂದ ಸಹಾಯವಾಗಲಿ. ಮತ್ತೆ ಭೇಟಿಯಾಗೋಣ ಎಂದು ಬರೆದಿದ್ದಾರೆ.  ಉದ್ಯಮಿ ಸೇರಿದಂತೆ ಒಟ್ಟು ಐವರು ಇಂಡಿಯನ್ ಟ್ರೀ ರೆಸ್ಟೋರೆಂಟ್‍ನಲ್ಲಿ ಊಟ ಮಾಡಿದ್ದರು. ಅವರದ್ದು 79.05 ಯೂರೋಸ್ ಬಿಲ್ ಆಗಿತ್ತು. ಬಿಲ್ ಜತೆಗೆ ಸಾವಿರ ಯೂರೋಸ್‍ಅನ್ನು ಹೆಚ್ಚುವರಿಯಾಗಿ ಟಿಪ್ಸ್ ರೂಪದಲ್ಲಿ ಪಾವತಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin