ಬ್ರಿಟನ್ ಮೇಲೆ ದಾಳಿಗೆ ಐಎಸ್ ಉಗ್ರರ ಕುತಂತ್ರ : ವಾಚ್‍ಡಾಗ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ISIS--01

ಲಂಡನ್, ಫೆ.27-ಅತ್ಯಂತ ಕ್ರೂರ ಕೃತ್ಯಗಳಿಗೆ ಜಗತ್ತಿನ ಬಲಾಢ್ಯ ದೇಶಗಳನ್ನೇ ಕಂಗೆಡಿಸಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕರು ಬ್ರಿಟನ್ ಮೇಲೆ ಭಯಾನಕ ದಾಳಿಗಳನ್ನು ನಡೆಸಲು ಸಂಚು ರೂಪಿಸಿರುವ ಸಂಗತಿ ಬಹಿರಂಗಗೊಂಡಿದೆ.   ಐರಿಷ್ ರಿಪಬ್ಲಿಕನ್ ಆರ್ಮಿ ಕಳೆದ 40 ವರ್ಷಗಳ ಹಿಂದೆ ನಡೆಸಿದ್ದ ದೊಡ್ಡ ಪ್ರಮಾಣದ ದಾಳಿಯಂತೆ ಆಕ್ರಮಣ ನಡೆಸಿ ಅಮಾಯಕ ನಾಗರೀಕನ್ನು ಬಲಿ ತಗೆದುಕೊಳ್ಳಲು ಐಎಸ್ ಉಗ್ರರು ಯೋಜನೆ ರೂಪಿಸಿದ್ದಾರೆ ಎಂದು ಇಂಗ್ಲೆಂಡ್‍ನ ಹೊಸ ಭಯೋತ್ಪಾದನೆ ಕೃತ್ಯಗಳ ಕಾವಲು ಸಮಿತಿ (ವಾಚ್‍ಡಾಗ್) ಗಂಭೀರ ಎಚ್ಚರಿಕೆ ನೀಡಿದೆ.

ಭಯೋತ್ಪಾದನೆ ನಿಗ್ರಹಕ್ಕಾಗಿ ಜಾರಿಯಲ್ಲಿರುವ ಬ್ರಿಟಿಷ್ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿಯೋಜನೆಗೊಂಡಿರುವ ಖ್ಯಾತ ವಕೀಲ ಮತ್ತು ವಾಚ್‍ಡಾಗ್ ಮುಖ್ಯಸ್ಥ ಮ್ಯಾಕ್ಸ್ ಹಿಲ್ ಸಂಡೇ ಟೆಲಿಗ್ರಾಫ್ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ಆತಂಕಕಾರಿ ಸಂಗತಿಗಳನ್ನು ಬಹಿರಂಗಗೊಳಿಸಿದ್ದಾರೆ.   ಇಂಗ್ಲೆಂಡ್‍ನ ನಗರಗಳ ಮೇಲೆ ದಾಳಿ ನಡೆಸಿ ಮುಗ್ಧ ಜನರ ಮಾರಣ ಹೋಮ ನಡೆಸುವುದು ಉಗ್ರರ ಉದ್ದೇಶವಾಗಿದೆ. ಇದಕ್ಕಾಗಿ ಐಎಸ್ ಸಜ್ಜಾಗಿದೆ. ಈ ಸನ್ನಿವೇಶದಲ್ಲಿ ನಾವೆಲ್ಲ ಎಷ್ಟೇ ಕಟ್ಟೆಚ್ಚರದಿಂದ ಇದ್ದರೂ ಆತಂಕಗೊಳಿಸುವಂಥ ದಾಳಿ ಸಾಧ್ಯತೆ ದಟ್ಟವಾಗಿದೆ ಎಂದು ಮ್ಯಾಕ್ಸ್ ಹಿಲ್ ಎಚ್ಚರಿಕೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin