ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ್ದ ಸಿರಾಜುದ್ದೌಲ

ಈ ಸುದ್ದಿಯನ್ನು ಶೇರ್ ಮಾಡಿ

Hiriyuru

ಹಿರಿಯೂರು, ಆ.19-1757ರಲ್ಲಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಮೊದಲ ಧ್ವನಿ ಎತ್ತಿದ್ದು ಸಿರಾಜುದ್ದೌಲ. ತದ ನಂತರ 18ನೇ ಶತಮಾನದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಎಂದು ಜಮಾತ್ ವಲುಮಾ-ಎ-ಹಿಂದ್ ಸಂಘಟನೆ ರಾಜ್ಯ ಉಪಾಧ್ಯಕ್ಷ ಮುಫ್ತಿ ಮೊಹಮದ್ ಫಾಕೀರ್ ಹುಸೇನ್ ಹೇಳಿದರು.ನಗರದ ಆಜಾದ್ ಬಡಾವಣೆಯಲ್ಲಿ ಜಮಾತ್ ವಲುಮಾ-ಎ-ಹಿಂದ್ ಏರ್ಪಡಿಸಿದ್ದ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಂರ ಪಾತ್ರ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬ್ರಿಟಿಷರು ಟಿಪ್ಪು ಸುಲ್ತಾನನ್ನು ಸೆರೆ ಹಿಡಿಯಬೇಕು, ಇಲ್ಲವೇ ಕೊಲ್ಲಬೇಕು.

ಅದರ ವಿನಾ ತಮಗೆ ಅಖಂಡ ಭಾರತ ದೊರಕದು ಎಂದು ಯೋಚಿಸಿ 1799ರಲ್ಲಿ ಮೋಸದಿಂದ ಆತನನ್ನು ಕೊಲ್ಲಿಸಿದರು. ನಂತರ ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದವರು ಷಾ ಅಬ್ದುಲ್ ಅಜೀರ್ ದೆಹಲ್ವಿ ಹಾಗೂ ಸೈಯದ್ ಅಹಮದ್ ಬರೇಲ್ವಿ. 1864ರಿಂದ 1868ರ ಒಳಗೆ 1400 ಇಸ್ಲಾಂ ಧರ್ಮಗುರುಗಳನ್ನು ಕಂಡ ಕಂಡಲ್ಲಿ ನೇಣಿಗೇರಿಸಲಾಯಿತು ಎಂದು ವಿಷಾದಿಸಿದರು.ಶಾಸಕ ಡಿ.ಸುಧಾಕರ್, ಮೌಲಾನ ಮೊಹಸೀನ್‍ಆಲಮ್ ಸಾಹೇಬ್, ಅಬ್ದುಲ್ಲಾ, ರಬ್ಬಾನಿ, ವಸೀಮ್, ಜಾಕೀರ್‍ಹುಸೇನ್, ಇರ್ಫಾನ್, ಬಿ.ಎಸ್.ನವಾಬ್‍ಸಾಬ್, ಷಫೀವುಲ್ಲಾಸಾಬ್, ಎಸ್.ಇ್ವ.ಪಿ.ನವಾಬ್ ಇತರರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin