ಬ್ರೆಜಿಲ್ ಜೈಲಿನಲ್ಲಿ ನಡೆದ ಭೀಕರ ಘರ್ಷಣೆಯಲ್ಲಿ 25 ಕೈದಿಗಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

258-Kiled

ಸಾವೊ ಪಾಲೊ, ಅ.17-ಉತ್ತರ ಬ್ರೆಜಿಲ್‍ನ ಕಾರಾಗೃಹವೊಂದರಲ್ಲಿ ಎರಡು ಬಣಗಳ ನಡುವೆ ಭುಗಿಲೆದ್ದ ಭೀಕರ ಘರ್ಷಣೆಯಲ್ಲಿ ಕನಿಷ್ಠ 25 ಮಂದಿ ಕೈದಿಗಳು ಹತರಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ರೊರೈಮಾ ರಾಜ್ಯದ ರಾಜಧಾನಿ ಬೋವಾ ವಿಸ್ಟಾದಲ್ಲಿ ಬಂದೀಖಾನೆಯು ಕಾಳಗದಿಂದ ಅಕ್ಷರಶ: ರಣರಂಗವಾಗಿದ್ದು ಅಲ್ಲಿನ ಭೀಬತ್ಸ ದೃಶಗಳು ಬೆಚ್ಚಿಬೀಳಿಸುವಂತಿದೆ.
ಭೀಕರ ಹೊಡೆದಾಟದಲ್ಲಿ ಏರು ಜನರ ಶಿರಚ್ಛೇದ ಮಾಡಲಾಗಿದ್ದರೆ, ಆರು ಮಂದಿಯನ್ನು ಸಜೀವ ದಹನ ಮಾಡಿ ಕೊಲ್ಲಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅಗ್ರಿಕೋಲಾ ಡಿ ಮೊಂಟೆ ಕ್ರಿಸ್ಟೋ ಕಾರಾಗೃಹದ ಒಂದು ಬಣದ ಕೈದಿಗಳು ನಿನ್ನೆ ಇನ್ನೊಂದು ಗುಂಪು ಮೇಲೆ ಮುಗಿಬಿದ್ದಾಗ ಈ ಭೀಕರ ಕಾಳಗ ನಡೆಯಿತು ಎಂದು ಸ್ಥಳೀಯ ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ಧಿ ತಾಣ ಜಿಐ ವರದಿ ಮಾಡಿದೆ.

ಚಾಕು-ಚೂರಿಗಳು ಮತ್ತು ಮರದ ತುಂಡುಗಳೊಂದಿಗೆ ಸಜ್ಜಾಗಿದ್ದ ಕೈದಿಗಳು ಪರಸ್ಪರ ಭೀಕರವಾಗಿ ಬಡಿದಾಡಿಕೊಂಡರು ಎಂದು ಈ ಸಂದರ್ಭದಲ್ಲಿ ಜೈಲಿನಲ್ಲಿ ತನ್ನ ಪತಿಯನ್ನು ಭೇಟಿ ಮಾಡಲು ಬಂದಿದ ಮಹಿಳೆಯೊಬ್ಬಳು ತಿಳಿಸಿದ್ದಾಳೆ.  ಕಾರಾಗೃಹದಲ್ಲಿ ಬೆಳಗಿನ ಸಂದರ್ಶನದ ವೇಳೆಯಲ್ಲಿ ಈ ಘರ್ಷಣೆ ಭುಗಿಲೆದ್ದಿದ್ದು, ಕೈದಿಗಳ ಸುಮಾರು 100ಕ್ಕೂ ಹೆಚ್ಚು ಬಂಧು-ಮಿತ್ರರನ್ನು ಕೆಲಕಾಲ ಒತ್ತೆಯಾಳಾಗಿ ಇಟ್ಟುಕೊಳ್ಳಲಾಗಿತ್ತು. ಇವರಲ್ಲಿ ಬಹುತೇಕ ಮಹಿಳೆಯರಿದ್ದರು ಎಂದು ರೊರೈಮಾ ಸ್ಟೇಟ್ ಸೆಕ್ರಟರಿ ಆಫ್ ಜಸ್ಟೀಸ್ ಉಜೈಲ್ ಕ್ಯಾಸ್ಟ್ರೊ ಹೇಳಿದ್ದಾರೆ. ಕೈದಿಗಳ ಘರ್ಷಣೆ ಉಲ್ಬಣಗೊಳ್ಳುತ್ತಿದ್ದಂತೆ ವಿಶೇಷ ಕಾರ್ಯಾಚರಣೆ ಪೊಲೀಸರು ಜೈಲಿಗೆ ಧಾವಿಸಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದರು ಮತ್ತು ಪರಿಸ್ಥಿತಿಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾದರು.

ಎಲ್ಲ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಕ್ಯಾಸ್ಟ್ರೋ ಹೇಳಿದ್ದಾರೆ.  ತಮ್ಮ ಬೇಡಿಕೆಗಳನ್ನು ಆಲಿಸಲು ಓರ್ವ ನ್ಯಾಯಾಧೀಶರು ಸ್ಥಳಕ್ಕೆ ಬರಬೇಕೆಂದು ಗಲಭೆಕೋರರು ಬಿಗಿಪಟ್ಟು ಹಿಡಿದಿದ್ದಾರೆ. ಬ್ರೆಜಿಲ್ ರಾಜಧಾನಿ ರಿಯೊ ಡಿ ಜನೈರೊದಿಮದ ವಾಯುವ್ಯಕ್ಕೆ 3,400 ಕಿ.ಮೀ.ದೂರದಲ್ಲಿದ್ದು, ವೆನಿಜುವೆಲಾ ಗಡಿ ಭಾಗದಲ್ಲಿ ಈ ಬಂಧೀಖಾನೆ ಇದೆ.

► Follow us on –  Facebook / Twitter  / Google+

Facebook Comments

Sri Raghav

Admin