ಬ್ರೆಜಿಲ್ ಜೈಲಿನಲ್ಲಿ ಮತ್ತೆ ಹಿಂಸಾಚಾರ : 33 ಕೈದಿಗಳ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Brazil

ರಿಯೊ ಡಿ ಜನೈರೊ, ಜ.7-ಬ್ರೆಜಿಲ್ ಜೈಲೊಂದರಲ್ಲಿ ಮತ್ತೆ ಭುಗಿಲೆದ್ದ ಭೀಕರ ಹಿಂಸಾಚಾರದಲ್ಲಿ 33ಕ್ಕೂ ಹೆಚ್ಚು ಕೈದಿಗಳು ಮೃತಪಟ್ಟಿದ್ದು ಅನೇಕರು ಗಾಯಗೊಂಡಿದ್ದಾರೆ. ಕಳೆದ ಐದು ದಿನಗಳ ಹಿಂದಷ್ಟೆ ಅಮೆಜಾನ್ ಪ್ರಾಂತ್ಯದ ಮನಾಸ್ ನಗರದ ಬಂದೀಖಾನೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ 56 ಕೈದಿಗಳು ಕಗ್ಗೊಲೆಯಾಗಿದ್ದರು.
ಅಮೆಜಾನ್ ಪ್ರಾಂತ್ಯದ ರೋರೈಮಾ ಜೈಲಿನಲ್ಲಿ ಎರಡು ಗುಂಪುಗಳ ನಡುವೆ ನಿನ್ನೆ ನಡೆದ ಘರ್ಷಣೆಯಲ್ಲಿ 33ಕ್ಕೂ ಹೆಚ್ಚು ಮಂದಿ ಹತರಾಗಿದ್ದಾರೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮನಾಸ್ ನಗರದ ಜೈಲಿನಲ್ಲಿ ಐದು ದಿನಗಳ ಹಿಂದೆ ಎರಡು ಗುಂಪುಗಳ ನಡುವೆ ನಡೆದ ಗಲಭೆಯಲ್ಲಿ 56 ಕೈದಿಗಳು ಕೊಲ್ಲಲ್ಪಟ್ಟಿದ್ದರು. ಆದಾದ ಬಳಿಕೆ ವಿವಿಧ ಕಾರಾಗೃಹಗಳಲ್ಲೂ ಗಲಭೆ ಮತ್ತು ಹಿಂಸಾಚಾರ ಭುಗಿಲೆಳಬಹುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಈ ಘೋರ ಹತ್ಯಾಕಾಂಡದ ಬಳಿಕ ಪರಾರಿಯಾದ 87 ಜನರಲ್ಲಿ 40 ಮಂದಿಯನ್ನು ಮತ್ತೆ ಬಂಧಿಸಿದ್ದರು.  ಮಾದಕ ವಸ್ತು ಮಾರಾಟ ಜಾಲದ ಎರಡು ಗುಂಪುಗಳ ನಡುವೆ ತೀವ್ರ ಘರ್ಷಣೆ ನಡೆದು 56 ಮಂದಿ ಹತರಾಗಿದ್ದರು. ಇವರಲ್ಲಿ ಬಹುತೇಕ ಮಂದಿಯ ರುಂಡಗಳನ್ನು ಚೆಂಡಾಡಲಾಗಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

 

Facebook Comments

Sri Raghav

Admin