ಬ್ರೆಡ್‍ ಟೋಸ್ಟ್ ನಲ್ಲಿ ವಿದೇಶಿ ಕರೆನ್ಸಿ ಸಾಗಿಸುವಾಗ ಸಿಕ್ಕಿಬಿದ್ದ ಭೂಪ

ಈ ಸುದ್ದಿಯನ್ನು ಶೇರ್ ಮಾಡಿ

Toste-01

ಮಂಗಳೂರು, ಜ.6- ಬ್ರೆಡ್‍ ಟೋಸ್ಟ್ ನಲ್ಲಿ ಬರೋಬ್ಬರಿ 25 ಲಕ್ಷ ರೂ. ಮೌಲ್ಯದ ವಿವಿಧ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದ ಭೂಪನೊಬ್ಬನನ್ನು ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಭಟ್ಕಳ ಮೂಲದ ಮಹಮ್ಮದ್ ಫಾರೂಕ್ ಅರಾಮರ್ (51) ಬಂಧಿತ ಆರೋಪಿ. ಈತನಿಂದ ಯುಎಸ್ ಡಾಲರ್ಸ್, ಯೂರೋ, ಯುಎಇ ಧಿರಂ, ಬ್ರಿಟಿಷ್ ಪೌಂಡ್, ಸೌದಿ ರಿಯಾಲ್ಸ್, ಖತಾರ್ ರಿಯಾಲ್ಸ್ ಕರೆನ್ಸಿಗಳನ್ನು ವಶಕ್ಕೆ ಪಡೆಯಲಾಗಿದೆ. ಫಾರೂಕ್ ಟೋಸ್ಟ್‍ನಲ್ಲಿ ಕರೆನ್ಸಿ ಇಟ್ಟುಕೊಂಡು ಮಂಗಳೂರಿನಿಂದ ಸ್ಪೈಸ್‍ಜೆಟ್ ವಿಮಾನದಲ್ಲಿ ದುಬೈಗೆ ಪ್ರಯಾಣಿಸಲು ಮುಂದಾಗಿದ್ದ. ವಲಸೆ ಅಧಿಕಾರಿಗಳು ತಪಾಸಣೆ ನಡೆಸಿದ ಬಳಿಕ ಖಚಿತ ಮಾಹಿತಿ ಮೇರೆಗೆ ಕೇಂದ್ರ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದಾಗ ಟೋಸ್ಟ್‍ನಲ್ಲಿ ವಿವಿಧ ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin