ಕೊಲಂಬಿಯಾದಲ್ಲಿ 81 ಜನರಿದ್ದ ವಿಮಾನ ಪತನ, 75 ಪ್ರಯಾಣಿಕರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Plane-accident

ಬೊಗೊಟಾ, ನ.29– ಬ್ರೆಜಿಲ್‍ನಿಂದ ಫುಟ್ಬಾಲ್ ಆಟಗಾರರನ್ನು ಕರೆದೊಯ್ಯುತ್ತಿದ್ದ ವಿಮಾನವೊಂದು ಅಪಘಾತಕ್ಕೀಡಾಗಿ ಸಿಬ್ಬಂದಿ ಸೇರಿದಂತೆ 75 ಮಂದಿ ಮೃತಪಟ್ಟಿರುವ ಘಟನೆ ಕೊಲಂಬಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇಂದು ಮುಂಜಾನೆ ಸಂಭವಿಸಿದೆ.  ಬೊಲಿವಿಯಾದಿಂದ ತೆರಳುತ್ತಿದ್ದ ಈ ವಿಮಾನದಲ್ಲಿ ಒಟ್ಟು 81 ಮಂದಿ ಪ್ರಯಾಣಿಸುತ್ತಿದ್ದರು. ಕೊಲಂಬಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಮಾನ ಅಪಘಾತಕ್ಕೀಡಾಗಿ 75 ಮಂದಿ ಮೃತಪಟ್ಟಿದ್ದು, ಆರು ಜನ ಮಾತ್ರ ಬದುಕುಳಿದಿದ್ದಾರೆ ಎಂದು ಮೆಡಿಲಿನ್ ನಗರದ ಮೇಯರ್ ಫೆಡ್ರಿಕೋ ಗುಟಿರೇಜ್ ತಿಳಿಸಿದ್ದಾರೆ.

ಇದೊಂದು ಘೋರ ದುರಂತ. ವಿಮಾನದ ಬಹುಭಾಗಕ್ಕೆ ಹಾನಿಯಾಗಿದ್ದು, ಆರು ಮಂದಿ ಹೊರತುಪಡಿಸಿ ಉಳಿದ 75 ಜನ ಸಾವಿಗೀಡಾಗಿದ್ದಾರೆ ಎಂದು ಅವರು ವಿಷಾದಿಸಿದ್ದಾರೆ.
ಬೊಲಿವಿಯಾದಿಂದ ತೆರಳಿದ ವಿಮಾನ ಮೆಡಿಲಿನ್ ನಗರದ ಹೊರವಲಯದ ಪರ್ವತ ಪ್ರದೇಶದ ಬಳಿ ವಿಮಾನ ನಿಲ್ದಾಣಕ್ಕೆ ಸಮೀಪ ಈ ದುರ್ಘಟನೆ ಸಂಭವಿಸಿದೆ.  ಟೇಕ್ ಆಫ್ ಆದ ಈ ವಿಮಾನ ಕೆಲ ಸಮಯದಲ್ಲೇ ಸಂಪರ್ಕ ಕಡಿದುಕೊಂಡಿತು. ಈ ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ. ಆ್ಯಂಬುಲೆನ್ಸ್ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ದುರಂತಕ್ಕೆ ಕಾರಣವೇನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಮೆಡಿಲಿನ್‍ನಲ್ಲಿ ಬುಧವಾರ ಅಟ್ಲೆಟಿಕ್ ನಾಸಿಯೋನಾಲ್ ವಿರುದ್ಧ ನಡೆಯಲಿದ್ದ ಕೊಪಾ ಸುಡ್‍ಅಮೆರಿಕಾ ಫೈನಲ್ ಪಂದ್ಯದಲ್ಲಿ ಬ್ರೆಜಿಲ್‍ನ ಚಾಪೆಕೊಯಿನ್ಸ್ ತಂಡ ಆಡಬೇಕಿತ್ತು. ಪ್ರಾದೇಶಿಕ ಮಟ್ಟದ ಈ ಪಂದ್ಯಾವಳಿ ಭಾರೀ ಮಹತ್ವ ಪಡೆದುಕೊಂಡಿತ್ತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin