ಬ್ಲಾಕ್ ಅಂಡ್ ವೈಟ್ ದಂಧೆಯಲ್ಲಿ ತೊಡಗಿದ್ದ ಆರ್‍ಬಿಐ ಅಧಿಕಾರಿಯೊಬ್ಬನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Black-Money-RBI

ಬೆಂಗಳೂರು,ಡಿ.13-ನೋಟು ನಿಷೇಧದ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಬ್ಯಾಂಕ್ ಉದ್ಯೋಗಿಗಳೇ ಕಪ್ಪು ಹಣವನ್ನು ಬಿಳಿ ಹಣಕ್ಕೆ ಪರಿವರ್ತಿಸುವ ದಂಧೆಯಲ್ಲಿ ತೊಡಗಿದ್ದು, ಇಂದು ಬೆಳಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‍ಬಿಐ) ಅಧಿಕಾರಿಯೊಬ್ಬರನ್ನು ಸಿಬಿಐ ಬಂಧಿಸಿದೆ. ಕೊಳ್ಳೇಗಾಲ ನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‍ಬಿಎಂ)ಗೆ ಸೇರಿದ 1.15ಕೋಟಿ ರೂ.ಗಳನ್ನು ವೈಟ್‍ಮನಿಯಾಗಿ ಪರಿವರ್ತಿಸುವ ದಂಧೆಯಲ್ಲಿ ತೊಡಗಿದ್ದ ಆರ್‍ಬಿಐನ ಹಿರಿಯ ವಿಶೇಷ ಸಹಾಯಕ ಅಧಿಕಾರಿ ಕೆ.ಮೈಕೇಲ್ ಮತ್ತು ಇತರೆ ಇಬ್ಬರನ್ನು ಸಿಬಿಐ ಅಧಿಕಾರಿಗಳು ಇಂದು ಬೆಳಗ್ಗೆ ಕೊಳ್ಳೇಗಾಲದಲ್ಲಿ ಬಂಧಿಸಿದ್ದಾರೆ.

ಬಂಧಿತರಿಂದ 17ಲಕ್ಷ ರೂ ನಗದು ವಶಪಡಿಸಿಕೊಂಡಿದ್ದು ಬಂಧಿತರ ವಿಚಾರಣೆಯನ್ನು ಅಧಿಕಾರಿಗಳು ತೀವ್ರಗೊಳಿಸಿದ್ದಾರೆ.  ಇದೂವರೆಗೆ ವಿವಿಧ ಬ್ಯಾಂಕ್‍ಗಳಿಗೆ ಸೇರಿದ ಉದ್ಯೋಗಿಗಳು ಕಪ್ಪು-ಬಿಳಿ ಹಣ ದಂಧೆಯಲ್ಲಿ ಶಾಮೀಲಾಗಿದ್ದು ಹಲವರನ್ನು ಬಂಧಿಸಲಾಗಿತ್ತು. ಮೈಕೇಲ್ ಆರ್‍ಬಿಐ ಪರವಾಗಿ ಎಸ್‍ಬಿಎಂನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಿಶೇಷ ಅಧಿಕಾರಿಯೊಬ್ಬರು ಹಳೆನೋಟು-ಹೊಸನೋಟು ಬದಲಾವಣೆ ದಂಧೆಯಲ್ಲಿ ತೊಡಗಿರುವುದು ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಪ್ರಕರಣವಾಗಿದೆ.
ಸರ್ಕಾರ ಭ್ರಷ್ಟಾಚಾರ ನಿಯಂತ್ರಣಕ್ಕೆ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದು, 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದು, ಜನಸಾಮಾನ್ಯರು ತಮ್ಮ ನಿತ್ಯ ಜೀವನಕ್ಕಾಗಿ ಪುಡಿಗಾಸಿಗೆ ಪರದಾಡುತ್ತಿದ್ದರೆ, ಆರ್‍ಬಿಐ ಅಧಿಕಾರಿಗಳೇ ಈ ದಂಧೆಯಲ್ಲಿ ತೊಡಗಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin