ಬ್ಲಾಕ್ ಅಂಡ್ ವೈಟ್ ಮನಿ ದಂದೆಯಲ್ಲಿ ಸಿಕ್ಕಿಬಿದ್ದ ಪದ್ಮಭೂಷಣ ಪುರಸ್ಕೃತ ಖ್ಯಾತ ವೈದ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

Padmashree-1
ಮುಂಬೈ, ಡಿ. 24- ರದ್ದಾದ ಹಳೆ ನೋಟುಗಳನ್ನು ಹೊಸ ಕರೆನ್ಸಿಯಾಗಿ ಪರಿವರ್ತಿಸುವ ಮತ್ತು ಅಕ್ರಮ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದ ದೇಶದ ಹೆಸರಾಂತ ಕ್ಯಾನ್ಸರ್‍ರೋಗ ತಜ್ಞ ಹಾಗೂ ಪ್ರತಿಷ್ಠಿತ ಪದ್ಮಭೂಷಣ ಮತ್ತು ಪದ್ಮ ಪ್ರಶಸ್ತಿ ಪುರಸ್ಕøತ ಡಾ. ಸುರೇಶ್ ಎಚ್. ಅಡ್ವಾಣಿ ವಿರುದ್ಧ ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಮೊಕದ್ದಮೆ ದಾಖಲಿಸಿಕೊಂಡಿದ್ದು, 25 ಕೋಟಿ ರೂ.ಗಳ ಅಕ್ರಮವನ್ನು ಪತ್ತೆಹಚ್ಚಿದ್ದಾರೆ. ಈ ದಂಧೆಯಲ್ಲಿ ತೊಡಗಿದ್ದ ಇತರ ಐವರು ಪ್ರಭಾವಿಗಳ ವಿರುದ್ಧವೂ ಸಹ ಪ್ರಕರಣ ದಾಖಲಾಗಿದೆ.   ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಯ ಖ್ಯಾತ ವೈದ್ಯ ಡಾ.ಸುರೇಶ್ ಅಡ್ವಾಣಿ 10 ಕೋಟಿ ರೂ.ಗಳ ಹಳೆ ನೋಟು ವರ್ಗಾವಣೆಯಲ್ಲಿ ತೊಡಗಿದ್ದಾರೆ ಎಂಬ ಖಚಿತ ಸುಳಿವಿನ ಮೇಲೆ ಮುಂಬೈನ ಅವರ ನಿವಾಸ ಮತ್ತಿತರ ಕಡೆಗಳ ಮೇಲೆ ಸಿಬಿಐ ದಾಳಿ ನಡೆಸಿದಾಗ ಒಟ್ಟು 25 ಕೋಟಿ ರೂ.ಗಳ ಅಕ್ರಮ ವಹಿವಾಟು ದಂಧೆ ಪತ್ತೆಯಾಯಿತು. ಇದರ ಹಿಂದೆ ವ್ಯವಸ್ಥಿತ ಜಾಲವೊಂದರ ಕೈವಾಡವಿದೆ ಎಂದು ಶಂಕಿಸಲಾಗಿದ್ದು, ತನಿಖೆ ತೀವ್ರಗೊಂಡಿದೆ.

ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಮಹಾರಾಷ್ಟ್ರದ ಪುಣೆ, ಮುಂಬೈ, ಔರಂಗಾಬಾದ್ ಮತ್ತು ಬೀಡ್‍ಗಳಲ್ಲೂ ಕೆಲವು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ.
ನೋಟು ರದ್ದಾದ ನಂತರ ಡಾ. ಸುರೇಶ್ ತಮ್ಮ ಪ್ರಭಾವ ಬೀರಿ ಕಪ್ಪು ಹಣವನ್ನು ಬಿಳಿಯಾಗಿಸುವ ದಂಧೆಯಲ್ಲಿ ತೊಡಗಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಇವರೊಂದಿಗೆ ಯೋಗೇಶ್ ಬಿ. ಶಿರೋಯೆ, ಧರ್ಮ ರಾಜ್ ಧಿಗ್ಲೆ, ಕ್ರಿಶ್ ಮತ್ತು ಗಜಾನಂದ್ ಅವರು ವಿರುದ್ಧವೂ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ಯೋಗೇಶ್ ಹೊರತುಪಡಿಸಿ ಇತರ ನಾಲ್ವರು ವೈದ್ಯನಾಥ್ ಕೋ-ಆಪರೇಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್‍ನ (ವಿಸಿಯುಬಿಎಲ್) ಅಧಿಕಾರಿಗಳಾಗಿದ್ದಾರೆ.

ಅಚ್ಚರಿಯ ಸಂಗತಿ ಎಂದರೆ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವರಾಗಿದ್ದ ದಿವಂಗತ ಗೋಪಿನಾಥ್ ಮುಂಡೆ ಅವರ ಪುತ್ರಿ ಬಿಜೆಪಿ ಸಂಸದೆ ಪ್ರೀತಂ ಮುಂಡೆ ಈ ಬ್ಯಾಂಕ್‍ನ ಅಧ್ಯಕ್ಷೆ. ಮುಂಬೈನ ಘಾಟ್ಕೋಪುರ್ ಪ್ರದೇಶದಲ್ಲಿ ಕಾರೊಂದನ್ನು ತಡೆದು ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅದರಲ್ಲಿ 10 ಕೋಟಿ ರೂ. ಹಳೆ ನೋಟುಗಳು ಇರುವುದು ಪತ್ತೆಯಾಯಿತು. ಕಾರಿನಲ್ಲಿದ್ದ ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಬ್ಲಾಕ್ ಅಂಡ್ ವೈಟ್ ದಂಧೆ, ಕಾಳಧನ ಸಾಗಣೆ ಮತ್ತು ಹವಾಲಾ ಹಗರಣಗಳ ವೃತ್ತಾಂತ ಬಯಲಿಗೆ ಬಂದಿತು. ಮಹಾರಾಷ್ಟ್ರದ ಬೀಡ್ ಪ್ರಾಂತ್ಯದ ವಿಸಿಯುಬಿಎಲ್‍ನ ಮುಖ್ಯ ಕಚೇರಿಯಿಂದ ಈ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದು ಬಂಧಿತರು ತಿಳಿಸಿದರು. ಬಳಿಕ ಅವರಲ್ಲಿದ್ದ 10 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಯಿತು.

ಈ ಹಳೆ ನೋಟುಗಳನ್ನು ಹೊಸ ಕರೆನ್ಸಿಯಾಗಿ ಪರಿವರ್ತಿಸಲು ಉದ್ದೇಶಿಸಲಾಗಿತ್ತು. ಈ ಆರೋಪಿಗಳು ಮಹಾರಾಷ್ಟ್ರ ಸ್ಟೇಟ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‍ಗೆ 15 ಕೋಟಿ ರೂ.ಗಳನ್ನು ಈಗಾಗಲೇ ಠೇವಣಿ ಮಾಡಿದ್ದಾರೆ.  ಈ ದಂಧೆಯಲ್ಲಿ ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸುತ್ತಿದ್ದು, ಬ್ಯಾಂಕ್ ಅಧಿಕಾರಿಗಳೂ ಸೇರಿದಂತೆ ಇನ್ನೂ ಅನೇಕರು ಶಾಮೀಲಾಗಿರುವ ಸಾಧ್ಯತೆ ಇದೆ. ಆರೋಪಿಗಳು ನೀಡಿದ ಸುಳಿವಿನ ಮೇಲೆ ಮಹಾರಾಷ್ಟ್ರದ ಪುಣೆ, ಮುಂಬೈ, ಔರಂಗಾಬಾದ್ ಮತ್ತು ಬೀಡ್‍ಗಳಲ್ಲೂ ಕೆಲವು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಪದ್ಮ ಪುರಸ್ಕøತನ ಕಪ್ಪು ದಂಧೆ:

Padmashree-2

ಈ ಪ್ರಕರಣದ ಬಗ್ಗೆ ತೀವ್ರ ವಿಚಾರಣೆ ನಡೆಯುತ್ತಿದ್ದು, ಡಾ. ಸುರೇಶ್ ಅಡ್ವಾಣಿಯವರ ಅಕ್ರಮ ವಹಿವಾಟಿನ ಬಗ್ಗೆ ಇನ್ನಷ್ಟು ಮಾಹಿತಿಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಡಾ.ಸುರೇಶ್ ಅಡ್ವಾಣಿ ಭಾರತದ ಖ್ಯಾತ ಕ್ಯಾನ್ಸರ್ ರೋಗ ತಜ್ಞರಾಗಿದ್ದಾರೆ. ಸ್ಟೆಮ್ ಸೆಲ್ ಟ್ರಾನ್ಸ್‍ಪ್ಲಾಂಟೇಷನ್ (ಅಕರ ಕೋಶ ಕಸಿ) ಚಿಕಿತ್ಸೆಯಲ್ಲಿ ಸಿದ್ದ ಹಸ್ತವಾಗಿರುವ ಇವರು ಬಾಲ್ಯದಿಂದಲೇ ಪೆÇೀಲಿಯೋ ಪೀಡಿತರು. ಗಾಲಿ ಕುರ್ಚಿ ಬಳಸುವ ಇವರು ಮಂಬೈನ ಗ್ರಾಂಟ್ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಅನೇಕ ವರ್ಷಗಳ ಕಾಲ ಟಾಟಾ ಮೆಮೋರಿಯಲ್ ಹಾಸ್ಟಿಟಲ್‍ನಲ್ಲಿ ಕಾರ್ಯನಿರ್ವಹಿದ್ದರು. ಆಂಕೋಲಾಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಅಮೆರಿಕದ ವಾಷಿಂಗ್ಟನ್‍ನ ಸಿಯಾಟಲ್‍ನ ಫ್ರೆಡ್ ಹಚ್ಚಿನ್‍ಸನ್ ಕ್ಯಾನ್ಸರ್ ರಿಸರ್ಚ್ ಸೆಂಟರ್‍ನಿಂದ ಬೋನ್ ಮ್ಯಾರೋ (ಅಸ್ಥಿಮಜ್ಜೆ) ಕಸಿ ಚಿಕಿತ್ಸೆಯಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ.

ಈಗ ಕಪ್ಪು ಹಣದ ಸುಳಿಯಲ್ಲಿ ಸಿಲುಕಿರುವ ಇವರು ಅನೇಕ ಪ್ರತಿಷ್ಠಿತ ಪ್ರಶಸ್ತಿ-ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ. 2012ರಲ್ಲಿ ಕೇಂದ್ರ ಸರ್ಕಾರದಿಂದ ಪದ್ಮಭೂಷಣ, ಭಾರತೀಯ ವೈದ್ಯಕೀಯ ಮಂಡಳಿಯ ಡಾ.ಬಿ.ಸಿ.ರಾಯ್ ರಾಷ್ಟ್ರೀಯ ಪ್ರಶಸ್ತಿ, ಹಾರ್ವರ್ಡ್ ಮೆಡಿಕಲ್ ಇಂಟರ್‍ನ್ಯಾಷನಲ್ ಸಂಸ್ಥೆಯಿಂದ ಕ್ಯಾನ್ಸರ್ ರೋಗ ಚಿಕಿತ್ಸೆಗಾಗಿ ಜೀವಮಾನ ಸಾಧನೆ ಪ್ರಶಸ್ತಿ, 2002ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಪ್ರತಿಷ್ಠಿತ ಧನ್ವಂತರಿ ಪ್ರಶಸ್ತಿ, ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ ಫೆಲೋಶಿಪ್ ಗೌರವಗಳನ್ನು ಪಡೆದಿದ್ದಾರೆ. ಖ್ಯಾತ ವೈದ್ಯರಾಗಿದ್ದ ಇವರೇ ಈಗ ಕಪ್ಪು ಹಣದ ಸುಳಿಗೆ ಸಿಲುಕಿರುವುದು ವೈದ್ಯಕೀಯ ಕ್ಷೇತ್ರಕ್ಕೆ ಕಪ್ಪುಚುಕ್ಕಿಯಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Padmashree-3

Facebook Comments

Sri Raghav

Admin