ಬ್ಲಾಕ್ ಆ್ಯಂಡ್ ವೈಟ್ ದಂಧೆ : ನಾಗನ ವಿರುದ್ಧ ಡಿಸೆಂಬರ್‍ನಲ್ಲೇ ದೂರು ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

Bomb-Naga--01

ಬೆಂಗಳೂರು, ಏ.15– ಪೊಲೀಸರ ದಾಳಿ ವೇಳೆ ತಪ್ಪಿಸಿಕೊಂಡಿರುವ ಪಾಲಿಕೆ ಮಾಜಿ ಸದಸ್ಯ ವಿ.ನಾಗರಾಜ್ ಅಲಿಯಾಸ್ ಬಾಂಬ್ ನಾಗ ಕಳೆದ ಡಿಸೆಂಬರ್‍ನಿಂದಲೂ ಬ್ಲಾಕ್ ಆ್ಯಂಡ್ ವೈಟ್ ದಂಧೆಯಲ್ಲಿ ತೊಡಗಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. [ ಇದನ್ನೂ ಓದಿ :   ಇನ್ನೂ ಸಿಗದ ಬಾಂಬ್ ‘ನಾಗ’, ಬಿಲಗಳಲ್ಲಿ ಪೊಲೀಸರ ಹುಡುಕಾಟ  ]  ನಿನ್ನೆ ಪೊಲೀಸರು ಈತನ ಕಚೇರಿ, ಮನೆ ಮೇಲೆ ದಾಳಿ ಮಾಡಿದಾಗ ಅಮಾನ್ಯಗೊಂಡ 1000, 500ರೂ. ನೋಟುಗಳು ಪತ್ತೆಯಾಗಿದ್ದು, ಕಳೆದ ಡಿಸೆಂಬರ್‍ನಲ್ಲಿ ಶ್ರೀರಾಮಪುರ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಆಯುಕ್ತರು ಈ ಸಂಜೆಗೆ ತಿಳಿಸಿದ್ದಾರೆ.ಹಣ ಬದಲಾವಣೆ ಮಾಡಿಕೊಳ್ಳಲು ವ್ಯಕ್ತಿಯೊಬ್ಬರು ಬಂದಿದ್ದಾಗ ಆ ವೇಳೆ ಪೊಲೀಸ್ ಬಂದರು ಎಂದು ಹೇಳಿ ಆತನನ್ನು ಕಳುಹಿಸಿದ್ದಾರೆ. ಆ ನಂತರ ಆ ವ್ಯಕ್ತಿ ಹಣ ಕೇಳಿದಾಗ ಪೊಲೀಸರು ತೆಗೆದುಕೊಂಡು ಹೋದರೆಂದು ಹೇಳಿದ್ದ. ಈ ಬಗ್ಗೆ ವ್ಯಕ್ತಿ ಶ್ರೀರಾಮಪುರ ಠಾಣೆಗೆ ದೂರು ನೀಡಿದ್ದು, ಈ ಪ್ರಕರಣವನ್ನು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. [ ಇದನ್ನೂ ಓದಿ : ಬ್ಲಾಕ್ ಆ್ಯಂಡ್ ವೈಟ್ ದಂಧೆಯಲ್ಲಿ ತೊಡಗಿದ್ದ ಬಾಂಬ್ ನಾಗನ ವಿರುದ್ಧ ಕೋಕಾ ಕಾಯ್ದೆ..? ]

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin