ಬ್ಲಾಕ್ ಮನಿ ವೈಟ್ ಮಾಡಿಕೊಳ್ಳುವ ಐಡಿಯಾಗಾಗಿ ಗೂಗಲ್ ನಲ್ಲಿ ಭಾರಿ ಹುಡುಕಾಟ

ಈ ಸುದ್ದಿಯನ್ನು ಶೇರ್ ಮಾಡಿ

Google

ನವದೆಹಲಿ, ನ. 11- ದೇಶಾದ್ಯಂತ ಐನೂರು-ಸಾವಿರ ರೂಪಾಯಿ ಮುಖಬೆಲೆ ನೋಟು ರದ್ದುಪಡಿಸಿ ಏಕಾಏಕಿಯಾಗಿ ಘೋಷಣೆ ಮಾಡಲಾಗಿದೆ. ಇದರಿಂದ ಶಾಕ್‍ಗೆ ಒಳಗಾಗಿರುವ ಲಕ್ಷಾಂತರ ಭಾರತೀಯರು ತಾವು ಹೊಂದಿರುವ ಕಪ್ಪು ಹಣ ಹೇಗೆ ಪರಿವರ್ತಿಸುವುದು ಎಂಬ ಪ್ರಶ್ನೆ ಹಾಕಿ ಗೂಗಲ್ ಸರ್ಚ್‍ನಲ್ಲಿ ಹುಡುಕಾಟ ನಡೆಸಿರುವ ಅಂಶ ಹೊರಬಿದ್ದಿದೆ(ಹೌಟ್ ಟು ಕನ್ವರ್ಟ್ ಬ್ಲಾಕ್ ಮನಿ)ಹೇಗೆ ಪರಿವರ್ತಿಸುವುದು ಎಂಬ ಪ್ರಶ್ನೆ ಹಾಕಿ ಲಕ್ಷಾಂತರ ಭಾರತೀಯರು ಒಂದೇ ರಾತ್ರಿಯಲ್ಲಿ ಗೂಗಲ್‍ನಲ್ಲಿ ಸರ್ಚ್ ಮಾಡಿದ್ದಾರೆ. ದೇಶಕ್ಕೆ ತೆರಿಗೆ ವಂಚಿಸಿ ಅಪಾರ ಪ್ರಮಾಣದಲ್ಲಿ ಕಪ್ಪು ಹಣ ತಮ್ಮ ಬಳಿ ಇಟ್ಟುಕೊಂಡಿರುವ ಕಾಳಧನಿಕರು ಹಣ ಪರಿವರ್ತಿಸುವ ಯಾವುದೇ ಉಪಾಯ ಕಾಣದೇ ತಕ್ಷಣ ಗೂಗಲ್ ಸರ್ಚ್ ಇಂಜಿನ್‍ನ ಮೊರೆ ಹೋಗಿದ್ದಾರೆ.

ಕಪ್ಪು ಹಣ ಬಿಳಿ ಹಣವಾಗಿ ಪರಿವರ್ತನೆ ಮಾಡುವ ಉಪಾಯ ಗೂಗಲ್‍ನಲ್ಲಿ ಹೆಚ್ಚು ಹುಡುಕಾಟ ನಡೆಸಿರುವವರಲ್ಲಿ ಹರಿಯಾಣ ಮೊದಲ ಸ್ಥಾನದಲ್ಲಿದ್ದು, ಮಹಾರಾಷ್ಟ್ರದ ಮುಂಬೈ ಎರಡನೇ ಸ್ಥಾನ ಹಾಗೂ ಪಂಜಾಬ್ ಮೂರನೇ ಸ್ಥಾನದಲ್ಲಿದೆ. ಇದರ ಜತೆಗೆ ನಾಲ್ಕನೇ ಸ್ಥಾನದಲ್ಲಿ ನವದೆಹಲಿ ಇದೆ.ಪ್ರಧಾನಿ ನರೇಂದ್ರ ಮೋದಿಯವರ ತವರು ಗುಜರಾತ್ ರಾಜ್ಯದವರು ಸಹ ಅತಿ ಹೆಚ್ಚು ಸಂಖ್ಯೆಯಲ್ಲಿ ಹುಡುಕಾಟ ನಡೆಸಿದ್ದಾರೆ ಎಂಬುದು ತಿಳಿದು ಬಂದಿದೆ. ಇದರ ಜತೆಗೆ ಹೊಸದಾಗಿ ಮುದ್ರಣಗೊಂಡಿರುವ 500, 2,000 ರೂ. ನೋಟುಗಳ ಬಗ್ಗೆ ತಿಳಿದುಕೊಳ್ಳಲು ಅಸಂಖ್ಯಾತ ಕುತೂಹಲಿಗರು ಕೂಡ ಗೂಗಲ್ ಸರ್ಚ್ ಇಂಜಿನ್ ಮೊರೆ ಹೋಗಿರುವುದು ತಿಳಿದು ಬಂದಿದೆ.

► Follow us on –  Facebook / Twitter  / Google+

Facebook Comments

Sri Raghav

Admin