ಬ್ಲೂವೇಲ್ ಗೇಮ್‍ನಿಂದ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ

ಈ ಸುದ್ದಿಯನ್ನು ಶೇರ್ ಮಾಡಿ

Game--01

ಇಂದೋರ್, ಆ.11-ಅಪಾಯಕಾರಿ ಬ್ಲೂ ವೇಲ್ ಆನ್‍ಲೈನ್ ಚಟಕ್ಕೆ ಬಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‍ನಲ್ಲಿ ನಡೆದಿದೆ. ಇಂದೋರ್‍ನ ಚಮೇಲಿ ದೇವಿ ಶಾಲೆಯ ವಿದ್ಯಾರ್ಥಿ ಸಾವಿಗೆ ಶರಣಾಗಲು ಯತ್ನಿಸಿದ. ಶಾಲೆಯ ಕಟ್ಟಡದ ಮೂರನೇ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾಗ ಸಹಪಾಠಿಗಳು ಮತ್ತು ಶಿಕ್ಷಕರು ಆತನನ್ನು ರಕ್ಷಿಸಿದರು.

ಬ್ಲೂ ವೇಲ್ ಗೇಮ್‍ನಲ್ಲಿ ನೀಡಲಾಗಿದ್ದ ಟಾಸ್ಕ್‍ನಿಂದ ಈ ಕೃತ್ಯಕ್ಕೆ ಕೈಹಾಕಿದ್ದಾಗಿ ಆ ವಿದ್ಯಾರ್ಥಿ ತಿಳಿಸಿದ್ದಾನೆ. ಯೂರೋಪ್ ಮತ್ತು ರಷ್ಯಾದಲ್ಲಿ ಅಪಾಯಕಾರಿ ಬ್ಲೂವೇಲ್ ಗೇಮ್‍ನಿಂದಾಗಿ ಈವರೆಗೆ 150ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಭಾರತದಲ್ಲೂ ಈ ಆನ್‍ಲೈನ್ ಗೇಮ್ ಚಟದಿಂದ ಒಂದು ಜೀವ ಬಲಿಯಾಗಿದ್ದು, ಆತ್ಮಹತ್ಯೆ ಪ್ರಯತ್ನಗಳು ಮುಂದುವರಿದಿವೆ.

Facebook Comments

Sri Raghav

Admin