ಬ್ಲೆಡ್ ನಿಂದ ಕತ್ತು ಕೊಯ್ದುಕೊಂಡು ಜೈಲಿನಲ್ಲಿ ರೇಪಿಸ್ಟ್ ಸೈಕೋ ಜೈಶಂಕರ್ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Jai-Shankar--01

ಬೆಂಗಳೂರು, ಫೆ.27- ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಕುಖ್ಯಾತಿ ಹೊಂದಿ ಜೈಲು ಪಾಲಾಗಿದ್ದ ವಿಕೃತ ಕಾಮಿ ಜೈಶಂಕರ್ (36) ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಡರಾತ್ರಿ 2 ಗಂಟೆ ವೇಳೆಗೆ ಈತ ತನ್ನ ಸೆಲ್‍ನಲ್ಲಿ ಬ್ಲೇಡ್‍ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಜೈಲು ಸಿಬ್ಬಂದಿ ಕೂಡಲೇ ಈತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.

ತಮಿಳುನಾಡಿನ ಸೇಲಂ ಮೂಲದವನಾದ ಈತ 19ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಈತ ನಾಲ್ಕು ಬಾರಿ ಜೈಲಿನಿಂದ ಪರಾರಿಯಾಗಿದ್ದನು. 2009, 2011, 2013, 2015ರಲ್ಲಿ ಈತ ಜೈಲಿನಿಂದ ಪರಾರಿಯಾಗಿದ್ದ. ಎರಡು ವರ್ಷಗಳ ಹಿಂದೆ ಜೈಲು ಶಿಕ್ಷೆ ಅನುಭವಿಸುತ್ತಿದ್ದ ವೇಳೆ 15 ಅಡಿ ರಕ್ಷಣಾ ಗೋಡೆ ಹಾರಿ ಪರಾರಿಯಾಗಿದ್ದ.

ನಂತರ ಈತನನ್ನು ಹುಡುಕಿಕೊಟ್ಟವರಿಗೆ 15 ಲಕ್ಷ ರೂ. ಬಹುಮಾನ ಸಹ ಘೋಷಿಸಲಾಗಿತ್ತು. ಆತ ಪರಾರಿಯಾಗಿದ್ದ ಮೂರು ದಿನಗಳ ಬಳಿಕ ಆತನೇ ಪೊಲೀಸರ ಬಲೆಗೆ ಬಿದ್ದಿದ್ದ. ಅತ್ಯಾಚಾರ, ಕೊಲೆ ಪ್ರಕರಣಗಳಲ್ಲಿ ಈತನಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಸೇಲಂನಲ್ಲಿ ಪೇದೆ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದ ಈತ 19ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ.
ಈತನ ವರ್ತನೆಯಿಂದಾಗಿ ಜೈಲಿನಲ್ಲಿ ಪ್ರತ್ಯೇಕ ಸೆಲ್‍ನಲ್ಲಿ ಈತನನ್ನು ಇರಿಸಲಾಗಿತ್ತು.

Facebook Comments

Sri Raghav

Admin