ಭಕ್ತರ ಸೋಗಿನಲ್ಲಿ ಬಂದು ದೇವಿ ಅಭರಣ ಕಸಿದ ಕಳ್ಳರು

ಈ ಸುದ್ದಿಯನ್ನು ಶೇರ್ ಮಾಡಿ

thifte

ಮೈಸೂರು, ನ.5-ಭಕ್ತರ ಸೋಗಿನಲ್ಲಿ ದೇವಾಲಯಕ್ಕೆ ಬಂದು ದೇವಿಯ ಚಿನ್ನದ ಮಾಂಗಲ್ಯ ಮತ್ತು ಕಣ್ಣುಗಳನ್ನು ದೋಚಿರುವ ಘಟನೆ ಇಂದು ಬೆಳಿಗ್ಗೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮಂಚೇಗೌಡನ ಕೊಪ್ಪಲಿನ ಯಲ್ಲಮ್ಮ ಮತ್ತು ಚಾಮುಂಡೇಶ್ವರಿ ದೇವಾಲಯದಲ್ಲಿ ಇಂದು ಬೆಳಗ್ಗೆ ಎಂದಿನಂತೆ ಪುರೋಹಿತರು ದೇವಿಯನ್ನು ಅಲಂಕರಿಸಿ ಪೂಜೆ ಸಲ್ಲಿಸಿದ್ದರು. ಸುಮಾರು 9 ಗಂಟೆ ಸಮಯದಲ್ಲಿ ದೇವಸ್ಥಾನಕ್ಕೆ ಕೆಲ ಭಕ್ತರು ದರ್ಶನಕ್ಕಾಗಿ ಬಂದಿದ್ದ ವೇಳೆ ದೇವಾಲಯದ ಪಕ್ಕದಲ್ಲೇ ಇದ್ದ ತಮ್ಮ ಮನೆಯಿಂದ ಏನೋ ವಸ್ತು ತರಲು ಪುರೋಹಿತರು ತೆರಳಿದ್ದರು.

ಈ ಸಮಯವನ್ನೇ ಬಳಸಿಕೊಂಡ ಭಕ್ತರ ಸೋಗಿನಲ್ಲಿ ಬಂದಿದ್ದ ಕಳ್ಳರು ದೇವಿಯ ಮೈಮೇಲಿದ್ದ ಚಿನ್ನದ ಮಾಂಗಲ್ಯ ಮತ್ತು ಕಣ್ಣುಗಳನ್ನು ಹೊತ್ತು ಪರಾರಿಯಾಗಿದ್ದಾರೆ.ಪುರೋಹಿತರು ಮನೆಯಿಂದ ಹಿಂತಿರುಗಿದ ನಂತರ ದೇವಿ ಕಣ್ಣುಗಳು ಹಾಗೂ ಮಾಂಗಲ್ಯ ಕಾಣೆಯಾಗಿರುವುದು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿರುವ ವಿಜಯನಗರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

► Follow us on –  Facebook / Twitter  / Google+

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin