ಭಜ್ಜಿ ದಾಖಲೆ ಮುರಿದ ಅಶ್ವಿನ್
ಈ ಸುದ್ದಿಯನ್ನು ಶೇರ್ ಮಾಡಿ
ನಾಗ್ಪುರ, ಸೆ.26– ಟೆಸ್ಟ್ ಕ್ರಿಕೆಟ್ನ 500ನೆ ಪಂದ್ಯದಲ್ಲಿ ಭಾರತ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಅಶ್ವಿನ್, ಟರ್ಬನೇಟರ್ ಹರ್ಭಜನ್ಸಿಂಗ್ರ ದಾಖಲೆಯನ್ನು ಮುರಿದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ 4 ಟೆಸ್ಟ್ನ ಮೊದಲ ಪಂದ್ಯದಲ್ಲಿ ಒಟ್ಟು 11 ವಿಕೆಟ್ಗಳನ್ನು ಕೆಡವುದರ ಮೂಲಕ ಕಡಿಮೆ ಪಂದ್ಯಗಳಲ್ಲೇ 200 ವಿಕೆಟ್ಗಳನ್ನು ಬೀಳಿಸಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಹಿಂದೆ ಹರ್ಭಜನ್ಸಿಂಗ್ ಅವರು 46 ಪಂದ್ಯಗಳಲ್ಲಿ 200 ವಿಕೆಟ್ಗಳನ್ನು ಕೆಡವುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಅದೇ ಅಶ್ವಿನ್ ಈ ದಾಖಲೆಯನ್ನು ಬರೆಯಲು ತೆಗೆದುಕೊಂಡಿದ್ದು 37 ಪಂದ್ಯಗಳು ಮಾತ್ರ.
► Follow us on – Facebook / Twitter / Google+
Facebook Comments