ಭಣಗುಟ್ಟಿದ ಶಕ್ತಿಸೌಧಗಳು

ಈ ಸುದ್ದಿಯನ್ನು ಶೇರ್ ಮಾಡಿ

bhanagutida

ಬೆಂಗಳೂರು,ಸೆ.9- ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ವಿರೋಧಿಸಿ ಇಂದು ರಾಜ್ಯಾದ್ಯಂತ ಆಚರಿಸಿದ ಬಂದ್ ಪರಿಣಾಮ ಅಧಿಕಾರದ ಕೇಂದ್ರ ಸ್ಥಾನವಾದ ವಿಧಾನಸೌಧ-ವಿಕಾಸಸೌಧ, ಬಹುಮಹಡಿಗಳ ಕಟ್ಟಡ, ವಿಶ್ವೇಶ್ವರಯ್ಯ ಗೋಪುರ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಕೊರತೆ ಎದ್ದು ಕಾಣತೊಡಗಿತು. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಲ್ಲದೆ ಬಣಗುಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು. ಬಂದ್ ಬಿಸಿ ವಿಧಾನಸೌಧ, ವಿಕಾಸಸೌಧ, ಬಹುಮಹಡಿಯ ಕಟ್ಟಡಗಳಿಗೆ ತಟ್ಟಿತು.  ನಿತ್ಯ ಅಧಿಕಾರಿ, ನೌಕರರು ಹಾಗೂ ಸಾರ್ವಜನಿಕರಿಂದ ತುಂಬಿ ತುಳುಕುತ್ತಿದ್ದ ಕಚೇರಿಗಳೆಲ್ಲ ಖಾಲಿ ಖಾಲಿಯಾಗಿದ್ದವು. ಬಂದ್ ಹಿನ್ನೆಲೆಯಲ್ಲಿ ನೌಕರ ವರ್ಗದವರು, ಕಚೇರಿಗಳ ಕಡೆ ಸುಳಿಯಲಿಲ್ಲ. ಸಾರ್ವಜನಿಕರು ಕೂಡ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಶಕ್ತಿ ಕೇಂದ್ರವಾದ ವಿಧಾನಸೌಧ, ವಿಕಾಸಸೌಧ ಕಾರಿಡಾರ್‍ಗಳು ಬಿಕೋ ಎನ್ನುತ್ತಿದ್ದವು.

ಸರ್ಕಾರಿ ಕಚೇರಿಗಳಲ್ಲಿ ಅತ್ಯಂತ ವಿರಳವಾದ ಹಾಜರಾತಿ ಕಂಡುಬಂದಿತು. ಅಲ್ಲೊಬ್ಬರು, ಇಲ್ಲೊಬ್ಬರು ಅಧಿಕಾರಿ ನೌಕರರು ಮಾತ್ರ ಕಾಣಿಸಿಕೊಂಡರು. ಒಟ್ಟಾರೆ ಆಡಳಿತದ ಕೇಂದ್ರ ಸ್ಥಾನ ಹಾಗೂ ಶಕ್ತಿಕೇಂದ್ರವಾದ ವಿಧಾನಸೌಧ-ವಿಕಾಸಸೌಧ ಬಹುತೇಕ ಬಂದ್ ಆದಂತೆಯೇ ಕಂಡುಬಂದಿತು. ಬಂದ್ ಹಿನ್ನೆಲೆಯಲ್ಲಿ ಶಾಸಕರು, ಸಚಿವರು ಅವರ ಹಿಂಬಾಲಕರು ಕೂಡ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಬಂದ್ ಆಚರಣೆಗೆ ಆಡಳಿತ ಯಂತ್ರವೇ ಸ್ತಬ್ದವಾದಂತಾಗಿತ್ತು.

 

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin