ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ನಕ್ಸಲರು ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

4-Kile

ರಾಯ್ಪುರ, ಆ.17-ಛತ್ತೀಸ್ಘಡದ ದಂತೇವಾಡ ಜಿಲ್ಲೆಯಲ್ಲಿ ಇಂದು ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕಮಾಂಡರ್ ಶ್ರೇಣಿಯ ಓರ್ವ ಮಹಿಳೆ ಸೇರಿದಂತೆ ನಾಲ್ವರು ನಕ್ಸಲರು ಹತರಾಗಿ, ಯೋಧನೊಬ್ಬ ತೀವ್ರ ಗಾಯಗೊಂಡಿದ್ದಾನೆ.  ನಕ್ಸಲ್ ಹಾವಳಿ ಪೀಡಿತ ಪ್ರದೇಶ ವಾದ ದಂತೇವಾಡದ ದುರ್ಗಮ ಡಬ್ಬಾ-ಕುನ್ನಾ ಪರ್ವತದಲ್ಲಿ ಇಂದು ನಸುಕಿನಲ್ಲಿ ಭೀಕರ ಎನ್ಕೌಂಟರ್ ನಡೆಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಮಲ ಲೋಚನ್ ಕಶ್ಯಪ್ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಸಿಆರ್ಪಿಎಫ್, ಜಿಲ್ಲಾ ಮೀಸಲು ಸಮೂಹ ಹಾಗೂ ಎಸ್ಟಿಎಫ್,  ಮಾವೋವಾದಿ ವಿರುದ್ಧ ಜಂಟಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ನಕ್ಸಲರೊಂದಿಗೆ ಗುಂಡಿನ ಚಕಮಕಿ ನಡೆಯಿತು. ಈ ಎನ್ಕೌಂಟರ್ನಲ್ಲಿ ಕಮಾಂಡರ್ ರ್ಯಾಂ ಕಿನ ಓರ್ವ ಮಹಿಳೆ ಹಾಗೂ ಮೂವರು ನಕ್ಸಲೀಯರು ಹತರಾದರು. ಕಾರ್ಯಾಚರಣೆಯಲ್ಲಿ ಯೋಧ ನೊಬ್ಬ ಗಾಯಗೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.

ತಮಗೆ ದೊರೆತ ಖಚಿತ ಸುಳಿವಿನ ಮೇಲೆ, ಡಬ್ಬಾ ಮತ್ತು ಕುನ್ನಾ ಗ್ರಾಮಗಳ ಸಮೀಪ ಅರಣ್ಯಗಳಲ್ಲಿ ಅವಿತಿಟ್ಟುಕೊಂಡಿರುವ ನಕ್ಸಲರನ್ನು ಹೊರದಬ್ಬಲು ನಿನ್ನೆ ರಾತ್ರಿಯಿಂದ ಕಾರ್ಯಾಚರಣೆ ನಡೆಯುತ್ತಿತ್ತು. ಆಗ ಡಬ್ಬಾ ಗ್ರಾಮದ ಬಳಿ ನಕ್ಸಲರು ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದರು. ಯೋಧರು ನಡೆಸಿದ ಪ್ರತಿ ದಾಳಿಯಲ್ಲಿ ನಾಲ್ವರು ಹತರಾದರು.  ಶೋಧ ಕಾರ್ಯಾಚರಣೆ ವೇಳೆ ಮೃತ ನಕ್ಸಲೀಯರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಅರಣ್ಯ ಪ್ರದೇಶದಲ್ಲಿ ನಕ್ಸಲರ ಶೋಧ ಕಾರ್ಯಾಚರಣೆ ಮುಂದುವರೆದಿದೆ.

Facebook Comments

Sri Raghav

Admin