ಭದ್ರತೆ ನೀಡುವಂತೆ ಸಿಎಂಗೆ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Suneel--012

ಬೆಂಗಳೂರು,ಡಿ.11-ಸೂಕ್ತ ರಕ್ಷಣೆ ನೀಡುವಂತೆ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರವಿ ಬೆಳಗೆರೆ ಅವರಿಗೆ ಭೂಗತ ಲೋಕದ ನಂಟಿದೆ. ಅವರು ಜೈಲಿನಲ್ಲಿ ಇರಲಿ, ಹೊರಗಿರಲಿ ಅವರಿಂದ ನನಗೆ ಅಪಾಯವಿದ್ದು , ಸೂಕ್ತ ರಕ್ಷಣೆ ನೀಡುವಂತೆ ಮುಖ್ಯಮಂತ್ರಿಯವರಲ್ಲಿ ಕೋರಿದ್ದಾರೆ. ನನಗೆ ವಯಸ್ಸಾದ ತಂದೆ-ತಾಯಿ ಇದ್ದಾರೆ. ನಾನು ನಾಲ್ಕೈದು ಮಂದಿ ಅಂಗ ರಕ್ಷಕರನ್ನು ಇಟ್ಟುಕೊಳ್ಳುವಷ್ಟು ಸಾಮಥ್ರ್ಯ ಹೊಂದಿಲ್ಲ. ಹಾಗಾಗಿ ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಸುಬ್ರಹ್ಮಣ್ಯಪುರ ಠಾಣೆಗೆ ಸುನೀಲ್ ದೂರು : 

ಬೆಂಗಳೂರು, ಡಿ.11-ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿರುವ ರವಿ ಬೆಳಗೆರೆ ಅವರು ತಮಗೆ ದೂರವಾಣಿ ಕರೆ ಮಾಡಿದ್ದಾರೆ ಎಂದು ಸುಬ್ರಹ್ಮಣ್ಯಪುರ ಠಾಣೆಗೆ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ದೂರು ನೀಡಿದ್ದಾರೆ. ಇಂದು ಬೆಳಗ್ಗೆ ಠಾಣೆಗೆ ದೂರು ನೀಡಿರುವ ಸುನೀಲ್, ತನಗೆ ಬೆಳಗೆರೆ ಅವರು ದೂರವಾಣಿ ಕರೆ ಮಾಡಿ ಯಶೋಮತಿ ವಿಚಾರವಾಗಿ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ಅವರು ಈ ಸಂಜೆಯೊಂದಿಗೆ ಮಾತನಾಡಿ, ಪತ್ರಕರ್ತ ಸುನಿಲ್ ಹೆಗ್ಗರವಹಳ್ಳಿ ನೀಡಿರುವ ದೂರನ್ನು ಪಡೆಯಲಾಗಿದೆ. ಸದ್ಯಕ್ಕೆ ಎಫ್‍ಐಆರ್ ದಾಖಲು ಮಾಡಿಲ್ಲ. ಎನ್‍ಸಿ ಮಾಡಿಕೊಳ್ಳಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Facebook Comments

Sri Raghav

Admin