ಭಯೋತ್ಪಾದಕರಿಗೆ ಕಾನೂನು ಕುಣಿಕೆ ಮತ್ತಷ್ಟು ಬಿಗಿ

ಈ ಸುದ್ದಿಯನ್ನು ಶೇರ್ ಮಾಡಿ

Judgment--01

ನವದೆಹಲಿ, ಮೇ 28-ಭಯೋತ್ಪಾದನೆ ಕೃತ್ಯಗಳಲ್ಲಿ ಶಾಮೀಲಾಗುವ ಆರೋಪಿಗಳಿಗೆ ಕಾನೂನು ಕುಣಿಕೆಯನ್ನು ಮತ್ತಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ಕಾನೂನು ಆಯೋಗ ಪರಿಣಾಮಕಾರಿ ಕ್ರಮಗಳಿಗೆ ಸಲಹೆ ಮಾಡಿದೆ. ಒಬ್ಬ ವ್ಯಕ್ತಿಯು ಭಯೋತ್ಪಾದನೆ ಕೃತ್ಯಗಳಲ್ಲಿ ಶಾಮೀಲಾಗಿದ್ದರೆ ಜಾಮೀನು ನೀಡುವಿಕೆಯು ತಾನಾಗಿಯೇ ನಿರಾಕರಣೆ ಆಗಬಾರದು. ಬದಲಿಗೆ ಸೂಕ್ತ ಸಾಕ್ಷ್ಯಾಧಾರಗಳಿಗೆ ಆದ್ಯತೆ ನೀಡಬೇಕು ಎಂದು ಆಯೋಗ ಹೇಳಿದೆ.  ಭಯೋತ್ಪಾದನೆ ಕೃತ್ಯವೊಂದನ್ನು ಒಂದು ಕೃತ್ಯವಾಗಿ ಕೇವಲ ವರ್ಗೀಕರಣ ಮಾಡುವುದರಿಂದ ಅದು ಜಾಮೀನು ನಿರಾಕರಣೆಗೆ ಆಸ್ಪದ ನೀಡುವುದಕ್ಕಿಂತಲೂ ಸಾಕ್ಷ್ಯಾಧಾರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಕಠಿಣ ಕ್ರಮದ ಪ್ರಕ್ರಿಯೆಯೂ ನಡೆಯಬೇಕು ಎಂದು ಆಯೋಗ ತಿಳಿಸಿದೆ.ಜಾಮೀನು ನೀಡಿಕೆಗೆ ಸಂಬಂಧಪಟ್ಟ ನಿಬಂಧನೆಗಳ ಕುರಿತ ತನ್ನ ವರದಿಯಲ್ಲಿ ಈ ಸಂಗತಿಗಳನ್ನು ತಿಳಿಸಿರುವ ಆಯೋಗ ಭಯೋತ್ಪಾದನೆ ಕೃತ್ಯಗಳಲ್ಲಿ ಶಾಮೀಲಾದವರಿಗೆ ಜಾಮೀನು ನೀಡದೇ ಬಂಧನ ಅವಧಿಯನ್ನು ವಿಸ್ತರಿಸುವ ಬಗ್ಗೆಯೂ ಕೆಲವು ಸಲಹೆಗಳನ್ನು ತಿಳಿಸಿದೆ. ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಧಿನಿಯಮದಲ್ಲಿರುವ ನಿಯಮ-ನಿಬಂಧನೆಗಳಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡುವಂತೆಯೂ ಕಾನೂನು ಸಚಿವಾಲಯಕ್ಕೆ ಸಲ್ಲಿಸಲಾಗಿರುವ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin