ಭಯೋತ್ಪಾದಕರ ಗುಂಡಿಗೆ ಪಿಡಿಪಿ ನಾಯಕ ಬಲಿ
ಈ ಸುದ್ದಿಯನ್ನು ಶೇರ್ ಮಾಡಿ
ಶ್ರೀನಗರ, ಏ.24-ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿದೆ. ಉಗ್ರಗಾಮಿಗಳು ಇಂದು ಬೆಳಗ್ಗೆ ಗುಂಡು ಹಾರಿಸಿ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ (ಪಿಡಿಪಿ) ನಾಯಕ ಅಬ್ದುಲ್ ಘನಿ ಡರ್ ಅವರನ್ನು ಬರ್ಬರವಾಗಿ ಕೊಳೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದೆ. ಶ್ರೀನಗರದ 31 ಕಿ.ಮೀ.ದೂರದಲ್ಲಿರುವ ಪಿನ್ಗ್ಲೆನಾ ಪ್ರದೇಶದಲ್ಲಿ ಉಗ್ರರ ಗುಂಡಿನ ದಾಳಿಗೆ ಪಿಡಿಪಿ ನಾಯಕ ಘನಿ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿಯಿಂದ ಗಾಯಗೊಂಡ ಅವರು ಎಸ್ಎಂಎಚ್ಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ವೃತ್ತಿಯಲ್ಲಿ ವಕೀಲರೂ ಆಗಿದ್ದ ಅವರು ಪಕ್ಷದ ಪ್ರಭಾವಿ ನಾಯಕಗಾಗಿದ್ದರು. ಈ ತಿಂಗಳಲ್ಲಿ ಮೂವರು ಪಿಡಿಪಿ ಮುಖಂಡರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments