‘ಭಯೋತ್ಪಾದಕರ ರಾಷ್ಟ್ರ’ ಪಾಕಿಸ್ತಾನದ ವಿರುದ್ಧ ದಾಖಲೆ ಸಹಿ ಸಂಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Terrorism-01

ವಾಷಿಂಗ್ಟನ್, ಅ.2-ಪಾಕಿಸ್ತಾನವನ್ನು ಭಯೋತ್ಪಾದನೆ ಪ್ರಾಯೋಜಿತ ದೇಶವನ್ನಾಗಿ ಘೋಷಿಸುವ ಶ್ವೇತಭವನದ ಆನ್‍ಲೈನ್ ಅರ್ಜಿಗೆ 5 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹದ ದಾಖಲೆ ಬೆಂಬಲ ಲಭಿಸಿದೆ. ಈ ವ್ಯಾಪಕ ಬೆಂಬಲದಿಂದ ಪಾಕ್‍ಗೆ ಮುಖಭಂಗವಾಗಿದೆ. ಅಧ್ಯಕ್ಷ ಬರಾಕ್ ಒಬಾಮಾ ಅವರಿಂದ ಈ ಕೋರಿಕೆ ಅರ್ಜಿಗೆ ಅಂಕಿತ ಪಡೆಯಲು ಅಗತ್ಯವಾದ ಸಂಖ್ಯೆಗಿಂತಲೂ ಇದು ಐದು ಪಟ್ಟು ಹೆಚ್ಚಾಗಿದೆ.  ಆರ್‍ಜಿ ಎಂಬ ಆರಂಭಿಕ ಅಕ್ಷರಗಳಿಂದ ತನ್ನನ್ನು ಗುರುತಿಸಿಕೊಂಡಿರುವ ಓರ್ವ ವ್ಯಕ್ತಿ ಸೆ.21ರಂದು ಈ ಆನ್‍ಲೈನ್ ಅರ್ಜಿಯನ್ನು ಸೃಷ್ಟಿಸಿದ್ದರು. ಈ ಮನವಿಗೆ ಶ್ವೇತಭವನದಿಂದ ಅನುಮೋದನೆ ಪಡೆಯಲು 30 ದಿನಗಳ ಒಳಗೆ ಕನಿಷ್ಟ 1,00,000 ಸಹಿಗಳು ಬೇಕಾಗಿತ್ತು. ಆದರೆ ಕೇವಲ 11 ದಿನಗಳಲ್ಲೇ ಈ ಆನ್‍ಲೈನ್ ಅರ್ಜಿಗೆ 5 ಲಕ್ಷಕ್ಕೂ ಅಧಿಕ ಜನರ ಬೆಂಬಲ ವ್ಯಕ್ತವಾಗಿರುವುದು ಒಂದು ದಾಖಲೆಯಾಗಿದೆ. ಅಲ್ಲದೇ ಶ್ವೇತಭವನದಲ್ಲಿ ಅತ್ಯಂತ ಜನಪ್ರಿಯತೆ ಪಡೆದ ಅರ್ಜಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin