ಭಯೋತ್ಪಾದನೆಗಿಂತ ಲವ್ ಡೇಂಜರ್…!

ಈ ಸುದ್ದಿಯನ್ನು ಶೇರ್ ಮಾಡಿ

Terrorism--Love

ನವದೆಹಲಿ, ಏ.2- ಭಯೋತ್ಪಾದಕರ ದಾಳಿಯಲ್ಲಿ ಸಾವು-ನೋವು ಸಂಭವಿಸಿದರೆ, ಅದು ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಗಳಾಗುತ್ತವೆ. ಆದರೆ, ಕಳೆದ 15 ವರ್ಷಗಳಲ್ಲಿ ಪ್ರೀತಿ-ಪ್ರೇಮವು ಭಯೋತ್ಪಾದನೆ ದಾಳಿಗಳಿಂತಲೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಎಂದರೆ ನಿಮಗೆ ಅಚ್ಚರಿಯಾದರೂ ಅದು ಅಕ್ಷರಶಃ ಸತ್ಯ.  ಕಳೆದ ಒಂದೂವರೆ ದಶಕದಲ್ಲಿ ಅಂದರೆ 2001ರಿಂದ 2015ರ ಅವಧಿಯಲ್ಲಿ ಭಯೋತ್ಪಾದನೆ ಆಕ್ರಮಣಗಳಿಗಿಂತಲೂ ಆರು ಪಟ್ಟು ಭಾರತೀಯರನ್ನು ಲೌ ಕ್ರೈಮ್‍ಗಳು ಆಪೋಶನ ತೆಗೆದುಕೊಂಡಿವೆ. ಅಧಿಕೃತ ದಾಖಲೆಗಳ ಪ್ರಕಾರ 38,585 ಕೊಲೆಗಳು ಮತ್ತು ದ್ವೇಷದ ನರಹತ್ಯೆ ನಡೆದಿವೆ. ಅಲ್ಲದೇ 79,189 ಆತ್ಮಹತ್ಯೆಗಳೂ ಸಹ ಪ್ರೀತಿ-ಪ್ರೇಮಕ್ಕೆ ಸಂಬಂಧಿಸಿವೆ. ಇದೇ ಅವಧಿಯಲ್ಲಿ 2.6 ಲಕ್ಷ ಅಪಹರಣಗಳೂ ನಡೆದಿವೆ(ಯುವತಿಯರನ್ನು ಬಲವಂತದಿಂದ ಮದುವೆಯಾಗುವುದು ಈ ಅಪಹರಣಗಳ ಹಿಂದಿನ ಉದ್ದೇಶ).

ಇದೇ ಅವಧಿಯಲ್ಲಿ ಭಯೋತ್ಪಾದಕರಿಗೆ ಬಲಿಯಾದ ನಾಗರಿಕರು ಮತ್ತು ಭದ್ರತಾ ಪಡೆ ಸಿಬ್ಬಂದಿ ಸಂಖ್ಯೆ 20,000 ಸಾವಿರ ಮಾತ್ರ. ಪ್ರತಿ ದಿನ ದೇಶದ ವಿವಿಧೆಡೆ ಪ್ರೀತಿ ವಿಷಯಕ್ಕೆ ಸಂಬಂಧಪಟ್ಟಂತೆ ಸರಾಸರಿ ಏಳು ಕೊಲೆ ಪ್ರಕರಣಗಳು, 14 ಆತ್ಮಹತ್ಯೆಗಳು ಮತ್ತು 47 ಕಿಡ್ನ್ಯಾಪ್ ಕೇಸ್‍ಗಳು ವರದಿಯಾಗಿವೆ.
ಅಂಕಿ-ಅಂಶಗಳ ಪ್ರಕಾರ ಲವ್ ಟೆರರ್‍ಗೆ ಬಲಿಯಾದ ಅತಿ ಹೆಚ್ಚು ಮಂದಿ ಆಂಧ್ರ ಪ್ರದೇಶದವರು. ನಂತರದ ಸ್ಥಾನ ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯಪ್ರದೇಶ ರಾಜ್ಯಗಳದ್ದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin