ಭಯೋತ್ಪಾದನೆಗೆ ಬೆಂಬಲಿಸುತ್ತಿರುವ ಇರಾನ್ ವಿರುದ್ದ ಅಮೆರಿಕ ಹೊಸ ದಿಗ್ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Terrorism-Iran

ವಾಷಿಂಗ್ಟನ್, ಫೆ.5-ನೆರೆ ರಾಷ್ಟ್ರಗಳಿಗೆ ಇರಾನ್ ನೀಡುತ್ತಿರುವ ಭಯೋತ್ಪಾದನೆ ಬೆಂಬಲ ಮತ್ತು ಇತ್ತೀಚೆಗೆ ಕ್ಷಿಪಣಿ ಪರೀಕ್ಷೆ ನಡೆಸಿದ ಹಿನ್ನೆಲೆಯಲ್ಲಿ ಅದರ ವಿರುದ್ಧ ಅಮೆರಿಕ ಹೊಸ ದಿಗ್ಬಂಧನ ವಿಧಿಸಿದೆ.   ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಡಳಿತ ಇರಾನ್ ವಿರುದ್ಧ ವಿಧಿಸಿರುವ ಎರಡನೇ ದಿಗ್ಬಂಧನ ಇದಾಗಿದೆ. ಇರಾನ್‍ನ ಕ್ಷಿಪಣಿ ಕಾರ್ಯಕ್ರಮ ಹಾಗೂ ಯೆಮೆನ್‍ನ ಹೌದಿ ಬಂಡುಕೋರರಿಗೆ ನೀಡುತ್ತಿರುವ ಬೆಂಬಲದಿಂದಾಗಿ ಅಮೆರಿಕ ಈ ಕ್ರಮ ಕೈಗೊಂಡಿದೆ.   ಇರಾನ್ ಭಯೋತ್ಪಾದನೆಗೆ ನಿರಂತರ ಬೆಂಬಲ ನೀಡುತ್ತಿದೆ. ಕ್ಷಿಪಣಿ ಕಾರ್ಯಕ್ರಮಗಳನ್ನು ಅಭಿವೃದ್ದಿಗೊಳಿಸುತ್ತಿದೆ. ಇದರಿಂದ ಅಮೆರಿಕ ಸೇರಿದಂತೆ ಜಗತ್ತಿಗೆ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಇರಾನಿನಲ್ಲಿರುವ ಕಂಪನಿಗಳು ಮತ್ತು ವ್ಯಕ್ತಿಗಳನ್ನು ದಿಗ್ಬಂಧನಕ್ಕೆ ಗುರಿ ಮಾಡಲಾಗಿದೆ ಎಂದು ವಿದೇಶಿ ಸ್ವತ್ತುಗಳ ನಿಯಂತ್ರಣ ಖಜಾನೆ ಕಚೇರಿಯ ಉಸ್ತುವಾರಿ ನಿರ್ದೇಶಕ ಜಾನ್ ಸ್ಮಿತ್ ಹೇಳಿದ್ದಾರೆ.

ಇರಾನ್ ಎಚ್ಚರಿಕೆ : ವೈರಿಗಳು ತಪ್ಪು ಮಾಡಿದರೆ ಕ್ಷಿಪಣಿ ಉಡಾಯಿಸಲು ಹಿಂಜರಿಯುವುದಿಲ್ಲ ಎಂದು ಇರಾನ್‍ನ ರೆವ್ಯೂಲಷನರಿ ಗಾರ್ಡ್‍ನ ಉನ್ನತಾಧಿಕಾರಿಯೊಬ್ಬರು ಇದೇ ವೇಳೆ ನೀಡಿರುವ ಹೇಳೆಕೆ ಅಮೆರಿಕವನ್ನು ಮತ್ತಷ್ಟು ಕೆರಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin